ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅನಕ್ಷರಸ್ಥರ ಮಾಹಿತಿ ನೀಡಲು ಮನವಿ - Karavali Times ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅನಕ್ಷರಸ್ಥರ ಮಾಹಿತಿ ನೀಡಲು ಮನವಿ - Karavali Times

728x90

16 July 2026

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅನಕ್ಷರಸ್ಥರ ಮಾಹಿತಿ ನೀಡಲು ಮನವಿ

ಮಂಗಳೂರು, ಜುಲೈ 16, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆ ‘’ಸಾಕ್ಷರತಾ ಜಿಲ್ಲೆ‘’ ಎಂದು ಘೋಷಣೆಯಾಗಿದ್ದರೂ, 2011ರ ಜನಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.15 ಲಕ್ಷ ಅನಕ್ಷರಸ್ಥರು ಇರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅನಕ್ಷರಸ್ಥರನ್ನು ಸಮೀಕ್ಷೆ ಮಾಡಿ ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಶಾಲೆಗೆ ಹೋಗದ, ಕನ್ನಡ ಓದಲು, ಬರೆಯಲು ಹಾಗೂ ಸರಳ ಲೆÉಕ್ಕಾಚಾರ ಮಾಡಲು ಬಾರದ, ಅಜ್ಜಿ ಅಥವಾ ಅಜ್ಜ, ತಂದೆ, ತಾಯಿ ಅಥವಾ ಮನೆಯಲ್ಲಿ ಇರುವ ಯಾವುದೇ ಅನಕ್ಷರಸ್ಥ ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕಿದೆ.

ಅವರಿಗೆ ಸರಕಾರದ ವತಿಯಿಂದ ಉಚಿತ ಪುಸ್ತಕ, ಪೆನ್ನು, ಪೆನ್ಸಿಲ್ ಹಾಗೂ ಇತರ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಗುತ್ತದೆ. ಒಂದು ವೇಳೆ ತೀವ್ರ ಅನಾರೋಗ್ಯದಿಂದ, ಹಾಗೂ ಓದಲು ಬರೆಯಲು ಶಕ್ತರಿಲ್ಲದಿದ್ದರೂ ಜುಲೈ 25ರೊಳಗೆ ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದೆ. ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. 

ಅನಕ್ಷರಸ್ಥರ ಮಾಹಿತಿಯನ್ನು ದ.ಕ. ಜಿಲ್ಲಾ ಪಂಚಾಯತ್ ನಲ್ಲಿರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಛೇರಿ ಇಮೇಲ್ zssdakshinakannada@gmail.com ಅಥವಾ ಮೊಬೈಲ್ ಸಂಖ್ಯೆ 9845476842/   9449990810 ಸಂಪರ್ಕಿಸುವ ಮೂಲಕ ನೀಡಬಹುದು. 2027ರ ಭಾರತ ಜನಗಣತಿ ಕಾರ್ಯದ ಸಮೀಕ್ಷೆಯಲ್ಲಿ ಯಾರೊಬ್ಬರು ಅನಕ್ಷರಸ್ಥರು ಸಿಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಆಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅನಕ್ಷರಸ್ಥರ ಮಾಹಿತಿ ನೀಡಲು ಮನವಿ Rating: 5 Reviewed By: karavali Times
Scroll to Top