ಹಾವು ಕಡಿತಕ್ಕೆ 108ಕ್ಕೆ ಕರೆ ಮಾಡಿ ಎಂಬ ಫೇಕ್ ಸಂದೇಶ ವೈರಲ್ : ಎಚ್ಚರ ವಹಿಸಲು ಆರೋಗ್ಯಾಧಿಕಾರಿ ಸೂಚನೆ - Karavali Times ಹಾವು ಕಡಿತಕ್ಕೆ 108ಕ್ಕೆ ಕರೆ ಮಾಡಿ ಎಂಬ ಫೇಕ್ ಸಂದೇಶ ವೈರಲ್ : ಎಚ್ಚರ ವಹಿಸಲು ಆರೋಗ್ಯಾಧಿಕಾರಿ ಸೂಚನೆ - Karavali Times

728x90

21 July 2026

ಹಾವು ಕಡಿತಕ್ಕೆ 108ಕ್ಕೆ ಕರೆ ಮಾಡಿ ಎಂಬ ಫೇಕ್ ಸಂದೇಶ ವೈರಲ್ : ಎಚ್ಚರ ವಹಿಸಲು ಆರೋಗ್ಯಾಧಿಕಾರಿ ಸೂಚನೆ

ಮಂಗಳೂರು, ಜುಲೈ 21, 2026 (ಕರಾವಳಿ ಟೈಮ್ಸ್) : ಹಾವು ಕಡಿತಕ್ಕೆ ಈ ಔಷಧಿ ಲಭ್ಯವಿದೆ ಎಂಬ ಶೀರ್ಷಿಕೆಯಡಿಯಲ್ಲಿ ಸ್ನೇಕ್ ವೆನೊಮ್ ಆಂಟಿಸಿರಮ್ ಐ ಪಿ ಎಂಬ ಲಸಿಕೆಯ ಫೆÇೀಟೋದೊಂದಿಗೆ, “ನಿಮ್ಮಲ್ಲಿ ಯಾರಿಗಾದರೂ ಹಾವು ಕಚ್ಚಿದರೆ 108ಕ್ಕೆ ಕರೆ ಮಾಡಿ ಅವರು ನಿಮ್ಮ ಮನೆಗೆ ಬಂದು ಈ ಇಂಜೆಕ್ಷನ್ ನೀಡುತ್ತಾರೆ. ನೀವು ಅಪಾಯದಿಂದ ಪಾರಾಗುತ್ತೀರಿ. ಈ ಮಾಹಿತಿಗಳನ್ನು ಎಲ್ಲಾ ಗುಂಪುಗಳಿಗೆ ಹಂಚಿಕೊಳ್ಳಿ” ಎಂಬ ವರದಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರವಾಗುತ್ತಿದೆ. ಈ ವರದಿ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರಿಗೆ ನೀಡುತ್ತಿದೆ, ಆದ್ದರಿಂದ ಸಾರ್ವಜನಿಕರು ಈ ಮಾಹಿತಿಯ ಬಗ್ಗೆ ಎಚ್ಚರ ವಹಿಸಬೇಕು.

ವಿಷಕಾರಿ ಹಾವು ಕಡಿತದ ಚುಚ್ಚು ಮದ್ದು ಲಸಿಕೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಮೂಲಕ ನೀಡಲಾಗುತ್ತಿದೆ. ಈ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದರಿಂದ ಅತ್ಯಂತ ಎಚ್ಚರಿಕೆಯಿಂದ ನೇರ ನಿಗಾವಣೆಯ ಮೂಲಕ ನೀಡಲಾಗುತ್ತಿದೆ. ಈ ಲಸಿಕೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. 108 ವಾಹನ ಕೇವಲ ರೋಗಿಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯಲು ಇರುವ ಸರಕಾರಿ ಸೇವಾ ವಾಹನ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿರುವ ತಪ್ಪು ಸಂದೇಶಗಳ ಬಗ್ಗೆ ಗಮನ ನೀಡಬಾರದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಹಾವು ಕಡಿತಕ್ಕೆ 108ಕ್ಕೆ ಕರೆ ಮಾಡಿ ಎಂಬ ಫೇಕ್ ಸಂದೇಶ ವೈರಲ್ : ಎಚ್ಚರ ವಹಿಸಲು ಆರೋಗ್ಯಾಧಿಕಾರಿ ಸೂಚನೆ Rating: 5 Reviewed By: karavali Times
Scroll to Top