ಬೆಳ್ತಂಗಡಿ, ಜುಲೈ 26 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 16 ರಂದು ವರದಿಯಾಗಿದ್ದ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ, ತನಿಖೆ ಮುಂದುವರಿಸಿರುವ ಪೊಲೀಸರು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಎಂಬಾತನ ವಾಸ್ತವ್ಯದ ಮನೆಗೆ ಹಾಗೂ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂದೀಪ್ ಎಂಬವರುಗಳು ವಾಸವಿದ್ದ ಬೆಳ್ತಂಗಡಿ ಕುವ್ವೆಟ್ಟು ಗ್ರಾಮದ ವಸತಿ ಕಟ್ಟಡವೊಂದನ್ನು ಬೆಳ್ತಂಗಡಿ ಡಿವೈಎಸ್ಪಿ ಅವರ ನೇತೃತ್ವದಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದು ಶೋಧನೆ ನಡೆಸಿದ್ದಾರೆ. ತಪಾಸಣೆಯ ವೇಳೆ ಆರೋಪಿ ಸಂದೀಪ್ ಎಂಬಾತನ ಮನೆಯಲ್ಲಿ ಪ್ರಿಂಟರ್, ಸ್ಟೀಲ್ ಸ್ಕೇಲ್, ದ್ರಾವಣದ ಬಾಟಲಿ ಹಾಗೂ ಇತರ ಕೆಲವು ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
26 July 2026
- Blogger Comments
- Facebook Comments
Subscribe to:
Post Comments (Atom)











0 comments:
Post a Comment