ಬಂಟ್ವಾಳ, ಜುಲೈ 26 2026 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದಲ್ಲಿ ಜುಲೈ 25 ರಂದು ರಾತ್ರಿ ಎರಡು ಪ್ರತ್ಯೇಕ ಕಳವು ಪ್ರಕರಣಗಳು ನಡೆದಿದ್ದು, ಒಂದೇ ತಂಡದ ಕೃತ್ಯವೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಡ್ಕಿದು ನಿವಾಸಿ ಕೆ ಸೂರ್ಯನಾರಾಯಣ (79) ಅವರ ದೂರಿನಂತೆ, ಇವರು ಜುಲೈ 25 ರಂದು ರಾತ್ರಿ ಮನೆ ಸದಸ್ಯರೊಂದಿಗೆ ಮಲಗಿದ್ದಾಗ, ತಡರಾತ್ರಿ ಮನೆಯೊಳಗೆ ಇಬ್ಬರು ಅಪರಿಚಿತರು ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭ ಅವರು ಎದ್ದು ನೋಡಿದಾಗ ಅಪರಿಚಿತ ವ್ಯಕ್ತಿಗಳು ಸೂರ್ಯನಾರಾಯಣ ಅವರ ಕುತ್ತಿಗೆಯಲ್ಲಿದ್ದ ಸುಮಾರು 2.60 ಲಕ್ಷ ರೂಪಾಯಿ ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಸುಲಿಗೆ ಮಾಡಿ, ಮನೆಯ ಹಿಂಬಾಗಿಲಿನ ಮುಲಕ ಪರಾರಿಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡ್ಕಿದು ನಿವಾಸಿ ಆನಂದ ಸಪಲ್ಯ (53) ಅವರು ನೀಡಿದ ದೂರಿನಂತೆ, ಇವರು ಜುಲೈ 25 ರಂದು ಸಂಜೆ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕೆಎ19 ಇವೈ 6282 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವು ಮರುದಿನ ಬೆಳಿಗ್ಗೆ ನೋಡುವಾಗ ಕಾಣೆಯಾಗಿದೆ. ಸುತ್ತಮುತ್ತ ಹುಡುಕಾಡಿದರೂ ವಾಹನ ಪತ್ತೆಯಾಗಿಲ್ಲ. ಕಳವಾಗಿರುವ ದ್ವಿಚಕ್ರ ವಾಹನದ ಮೌಲ್ಯ ಸುಮಾರು 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಎರಡೂ ಕಳವು ಕೃತ್ಯಗಳು ಒಂದೇ ತಂಡ ನಡೆಸಿರುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಈ ಬಗ್ಗೆ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.











0 comments:
Post a Comment