ರಸ್ತೆ ಬದಿಯಲ್ಲಿ ಕಸ ಸುರಿದ ಪ್ರಕರಣ : ಹೊಟೇಲ್ ಮಾಲಕರಿಗೆ ದಂಡ ವಿಧಿಸಿದ ತಲಪಾಡಿ ಗ್ರಾಮ ಪಂಚಾಯತ್ - Karavali Times ರಸ್ತೆ ಬದಿಯಲ್ಲಿ ಕಸ ಸುರಿದ ಪ್ರಕರಣ : ಹೊಟೇಲ್ ಮಾಲಕರಿಗೆ ದಂಡ ವಿಧಿಸಿದ ತಲಪಾಡಿ ಗ್ರಾಮ ಪಂಚಾಯತ್ - Karavali Times

728x90

1 July 2026

ರಸ್ತೆ ಬದಿಯಲ್ಲಿ ಕಸ ಸುರಿದ ಪ್ರಕರಣ : ಹೊಟೇಲ್ ಮಾಲಕರಿಗೆ ದಂಡ ವಿಧಿಸಿದ ತಲಪಾಡಿ ಗ್ರಾಮ ಪಂಚಾಯತ್

ಮಂಗಳೂರು, ಜುಲೈ 01, 2026 (ಕರಾವಳಿ ಟೈಮ್ಸ್) : ರಸ್ತೆ ಬದಿಯಲ್ಲಿ ಕಸ ಸುರಿಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಿನ್ಯಾ, ಬೆಳ್ಮ ಹಾಗೂ ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮನಾಲೋಚಕರ ನೇತೃತ್ವದಲ್ಲಿ  ಪರಿಶೀಲನೆ ನಡೆಸಲಾಯಿತು. ಪರಿಶೀಲನೆಯ ಸಂದರ್ಭ ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಒಂದು ಹೋಟೆಲಿನವರು ಅನಧಿಕೃತವಾಗಿ ರಸ್ತೆ ಬದಿಯಲ್ಲಿ ಕಸ ಸುರಿದು, ಅದಕ್ಕೆ ಬೆಂಕಿ ಹಚ್ಚಿರುವ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಿದ್ದು, ಜಿಲ್ಲಾ ಪಂಚಾಯತ್ ಸಿಇಒ ಸೂಚನೆ ಮೇರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರನ್ನು ಸ್ಥಳಕ್ಕೆ ಕರೆಸಿ ಕ್ರಮ ಕೈಗೊಂಡರು. 

ಈ ಕೃತ್ಯವು ಪರಿಸರ ಮಾಲಿನ್ಯ ಉಂಟುಮಾಡುವುದರ ಜೊತೆಗೆ ಸಾರ್ವಜನಿಕ ಆರೋಗ್ಯಕ್ಕೂ ಹಾನಿಕಾರಕವಾಗಿರುವ ಹಿನ್ನೆಲೆಯಲ್ಲಿ ಸಂಬಂಧಿತ ಹೋಟೆಲಿಗೆ  2 ಸಾವಿರ  ರೂಪಾಯಿ ದಂಡ ವಿಧಿಸಿದ್ದು, ಇಂತಹ ಕೃತ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.

ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ರಸ್ತೆ ಬದಿಯಲ್ಲಿ ಕಸ ಸುರಿಯುವ ಪ್ರಕರಣಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಅಲ್ಲದೆ ಸಾರ್ವಜನಿಕರು ಕಸವನ್ನು ನಿಗದಿತ ಸ್ಥಳಗಳಿಗೆ ಮಾತ್ರ ವಿಲೇವಾರಿ ಮಾಡುವಂತೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ತಂಡ ಸೂಚಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ರಸ್ತೆ ಬದಿಯಲ್ಲಿ ಕಸ ಸುರಿದ ಪ್ರಕರಣ : ಹೊಟೇಲ್ ಮಾಲಕರಿಗೆ ದಂಡ ವಿಧಿಸಿದ ತಲಪಾಡಿ ಗ್ರಾಮ ಪಂಚಾಯತ್ Rating: 5 Reviewed By: karavali Times
Scroll to Top