ಶಕ್ತಿನಗರ ನಿವಾಸಿ ಯುವಕ ಕಾಣೆ : ಪತ್ತೆಗೆ ಮನವಿ - Karavali Times ಶಕ್ತಿನಗರ ನಿವಾಸಿ ಯುವಕ ಕಾಣೆ : ಪತ್ತೆಗೆ ಮನವಿ - Karavali Times

728x90

1 July 2026

ಶಕ್ತಿನಗರ ನಿವಾಸಿ ಯುವಕ ಕಾಣೆ : ಪತ್ತೆಗೆ ಮನವಿ

ಮಂಗಳೂರು, ಜುಲೈ 01, 2026 (ಕರಾವಳಿ ಟೈಮ್ಸ್) : ಶಕ್ತಿನಗರದ ಕ್ಯಾಸ್ಟೊಲಿನೋ ಕಾಲೋನಿ ನಿವಾಸಿ ಸ್ಪರ್ಶ್ ಭೂಷಣ್ ಸಿಂಗ್ (19 ವರ್ಷ) ಎಂಬವರು ಮನೆಯಲ್ಲಿ ಜಗಳವಾಡಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು ಜೂನ್ 29 ರಂದು ಮನೆ ಬಿಟ್ಟು ಹೋದವರು ಕಾಣೆಯಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ : 5.4 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ಕೂದಲು, ಸಪೂರ ಶರೀರ ಹೊಂದಿರುತ್ತಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಪ್ಪು ಬಣ್ಣದ ಟಿ-ಶರ್ಟ್, ಕ್ರೀಮ್ ಬಣ್ಣದ ಪ್ಯಾಂಟ್ ಧರಿಸಿದ್ದರು. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ಗ್ರಾಮಾಂತರ ಪೆÇೀಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಶಕ್ತಿನಗರ ನಿವಾಸಿ ಯುವಕ ಕಾಣೆ : ಪತ್ತೆಗೆ ಮನವಿ Rating: 5 Reviewed By: karavali Times
Scroll to Top