ಮಂಗಳೂರು, ಜುಲೈ 09, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪ್ರದೇಶಗಳಲ್ಲಿ ಕಳೆದ ಮೇ ತಿಂಗಳಿನಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಈಗಾಗಲೇ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ 58/2026, ಅ.ಕ್ರ 59/2026 ಹಾಗೂ ಅ.ಕ್ರ 64/2026 ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ಅಕ್ರ 78/2026 ಹಾಗೂ ಅಕ್ರ 79/2026 ರಂತೆ ಪ್ರಕರಣಗಳು ದಾಖಲಾಗಿರುತ್ತದೆ.
ಸದ್ರಿ ಪ್ರಕರಣಗಳ ಆರೋಪಿ ಪತ್ತೆಗಾಗಿ ತನಿಖೆ ನಡೆಸಲಾಗಿ ಪ್ರಕರಣ ಆರೋಪಿಯಾದ ತಮಿಳುನಾಡು ಕೊಯಂಬತ್ತೂರು ನಿವಾಸಿ ಜಯಕುಮಾರ್ ವಿ (55), ಎಂಬಾತನನ್ನು ಜುಲೈ 8 ರಂದು ದಸ್ತಗಿರಿ ಮಾಡಿ ಆರೋಪಿಯ ಬಳಿಯಿದ್ದ ಕಬ್ಬಿಣದ ಸಲಾಕೆ, ಸ್ಕ್ರೂ ಡ್ರೈವರ್, ಬ್ಯಾಗ್ ಹಾಗೂ 2 ಮೊಬೈಲ್ ಪೊನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿಚಾರಣೆಯ ವೇಳೆ ಆತ ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯ 5 ಪ್ರಕರಣಗಳನ್ನು ಹೊರತುಪಡಿಸಿ, ಮಂಗಳೂರು ಸುರತ್ಕಲ್ ಠಾಣಾ ವ್ಯಾಪ್ತಿಯ 1 ಪ್ರಕರಣ, ಕೇರಳ ರಾಜ್ಯದ 4 ಪೊಲೀಸ್ ಠಾಣೆಗಳಲ್ಲಿ ತಲಾ 1 ಪ್ರಕರಣಗಳು ಹಾಗೂ ಬೆಂಗಳೂರಿನಲ್ಲಿ 1 ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯ ವೇಳೆ ತಿಳಿದು ಬಂದಿರುತ್ತದೆ.
ಆರೋಪಿ ಪತ್ತೆ ಕಾರ್ಯದಲ್ಲಿ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ರವಿ ಬಿ.ಎಸ್ ಹಾಗೂ ನಾಗರಾಜ್ ಅವರ ನೇತೃತ್ವದಲ್ಲಿ ಪಿಎಸ್ಸೈಗಳಾದ ಆನಂದ ಎಂ, ಸಿಖಂದರ್ ಪಾಷಾ, ಸುತೇಶ್ ಕೆ.ಪಿ, ಬೆಳ್ತಂಗಡಿ ಪೆÇಲೀಸ್ ಠಾಣಾ ಅಪರಾಧ ದಳದ ಸಿಬ್ಬಂದಿಗಳಾದ ಪಂಪಾಪತಿ, ಗಿರೀಶ್, ಹೇಮರಾಜ್ ಎಚ್ ಪಿ, ಉಪ್ಪಿನಂಗಡಿ ಪೆÇಲೀಸ್ ಠಾಣಾ ಸಿಬ್ಬಂದಿ ಹರ್ಷಿತ್, ಕಡಬ ಪೆÇಲೀಸ್ ಠಾಣಾ ಸಿಬ್ಬಂದಿ ಪ್ರಕಾಶ್, ಸಿಡಿಆರ್ ವಿಭಾಗದ ಸಂಪತ್, ದಿವಾಕರ್ ಅವರುಗಳನ್ನು ಒಳಗೊಂಡ ತನಿಖಾ ತಂಡ ಪಾಲ್ಗೊಂಡಿದೆ.















0 comments:
Post a Comment