ಬಂಟ್ವಾಳ, ಜುಲೈ 19, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ನಡೆದ ಲಾವಣ್ಯ ಗೌಡ ಹತ್ಯೆ ಕೃತ್ಯ ಅತ್ಯಂತ ಖಂಡನೀಯ ಎಂದು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಬೇಬಿ ಕುಂದರ್ ಪ್ರತಿಕ್ರಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಅಮಾಯಕ ಯುವತಿ ಲಾವಣ್ಯ ಗೌಡ ಹತ್ಯೆಯಿಂದ ಇಡೀ ಜಿಲ್ಲೆಯ ಜನತೆ ಭಯಭೀತರಾಗಿದ್ದು ಹಾಡಹಗಲೇ ಕೊಚ್ಚಿ ಹತ್ಯೆ ಮಾಡಿದ ಪಾಪಿ ಚೇತನ್ ಗೌಡ ಈ ಭೂಮಿಯಲ್ಲಿ ಜೀವಂತ ಬದುಕಲು ಅರ್ಹತೆ ಇಲ್ಲದ ವ್ಯಕ್ತಿಯಾಗಿದ್ದಾನೆ. ಆತನಿಗೆ ಪೆÇಲೀಸ್ ಅಧಿಕಾರಿಗಳು ತಕ್ಷಣದಲ್ಲಿ ತಮ್ಮ ಪೆÇಲೀಸ್ ಕಾರ್ಯಾಚಣೆಯ ಭಾಗವಾಗಿ ಕಠಿಣ ನಿರ್ದಾರ ತೆಗೆದುಕೊಳ್ಳುವ ಮುಖಾಂತರ ರಾಜ್ಜದ ಜನತೆಗೆ ಪೆÇಲೀಸ್ ಅಧಿಕಾರಿಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸಿ ಸೂಕ್ತ ಸಂದೇಶವನ್ನು ನೀಡಬೇಕು. ಜೊತೆಗೆ ಸಾರ್ವಜನಿಕರಿಗೆ ಧೈರ್ಯ ತುಂಬುವಂತೆ ಅವರು ಒತ್ತಾಯಿಸಿದ್ದಾರೆ. ಮೃತ ಹೆಣ್ಣು ಮಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬೇಬಿ ಕುಂದರ್ ತಮ್ಮ ಸಂತಾಪ ಹಾಗೂ ಖಂಡನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.











0 comments:
Post a Comment