ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷರಾಗಿ ಜಯಂತ್ ಅಗ್ರಬೈಲ್ ಆಯ್ಕೆ - Karavali Times ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷರಾಗಿ ಜಯಂತ್ ಅಗ್ರಬೈಲ್ ಆಯ್ಕೆ - Karavali Times

728x90

20 July 2026

ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷರಾಗಿ ಜಯಂತ್ ಅಗ್ರಬೈಲ್ ಆಯ್ಕೆ

ಬಂಟ್ವಾಳ, ಜುಲೈ 20, 2026 (ಕರಾವಳಿ ಟೈಮ್ಸ್) : ಸ್ನೇಹಾಂಜಲಿ ಸೇವಾ ಸಂಘ (ರಿ) ಅಜ್ಜಿಬೆಟ್ಟು ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಂತ್ ಅಗ್ರಬೈಲ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. 

ಗೌರವಾಧ್ಯಕ್ಷರಾಗಿ ಪ್ರಮೋದ್ ಅಜ್ಜಿಬೆಟ್ಟು, ಉಪಾಧ್ಯಕ್ಷರಾಗಿ ನಿತಿನ್ ಅಜ್ಜಿಬೆಟ್ಟು ಹಾಗೂ ಗಣೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ಆಶಿಶ್ ಅಜ್ಜಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಮನೋಜ್ ಅಜ್ಜಿಬೆಟ್ಟು, ಕೋಶಾಧಿಕಾರಿಯಾಗಿ ಹರೀಶ್ ಅಗ್ರಬೈಲು, ಜೊತೆ ಕೋಶಾಧಿಕಾರಿಯಾಗಿ ಚರಣ್ ಅಗ್ರಬೈಲು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಅಜ್ಜಿಬೆಟ್ಟು, ಕ್ರೀಡಾ ಕಾರ್ಯದರ್ಶಿಗಳಾಗಿ ಸಂತೋಷ್ ಅಜ್ಜಿಬೆಟ್ಟು ಮತ್ತು ಯತೀಶ್ ಮೈಕ್ರೋ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರಣಾಮ್ ಅಜ್ಜಿಬೆಟ್ಟು ಹಾಗೂ ಪ್ರವೀಣ್ ಅಜ್ಜಿಬೆಟ್ಟು ಆಯ್ಕೆಯಾಗಿದ್ದಾರೆ.

ಸಂಘದ ಸಾಮಾಜಿಕ ಸೇವೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಯುವಜನರ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಘ ಕಾರ್ಯ£ರ್ವಹಿಸಲಿದೆ ಎಂದು ಅಧ್ಯಕ್ಷ ಜಯಂತ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷರಾಗಿ ಜಯಂತ್ ಅಗ್ರಬೈಲ್ ಆಯ್ಕೆ Rating: 5 Reviewed By: karavali Times
Scroll to Top