ಸುಳ್ಯ, ಜುಲೈ 20, 2026 (ಕರಾವಳಿ ಟೈಮ್ಸ್) : ಮಗಳನ್ನು ಅತ್ತೆ, ಮಾವ ಹಾಗೂ ನಾದಿನಿ ಸೇರಿ ಕೊಲೆ ಮಾಡಿರುವುದಾಗಿ ತಾಯಿಯೊಬ್ಬರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಮಗಳನ್ನು ಫಾತಿಮತ್ ನಿಶಾನಾ ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಪುತ್ತೂರು ಕೆದಂಬಾಡಿ ನಿವಾಸಿ ಜುಬೈದ (43) ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರ ಪುತ್ರಿ ಫಾತಿಮತ್ ನಿಶಾನ ಎಂಬಾಕೆಯನ್ನು ನಾಲ್ಕು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಜುಲೈ 18 ರಂದು ರಾತ್ರಿ ಆಕೆ ತಾಯಿಗೆ ಕರೆ ಮಾಡಿ ಮಾತನಾಡುವಾಗ ತನಗೆ ತನ್ನ ಮಾವ ಅಲವಿ, ಅತ್ತೆ ಆಯಿಷ, ನಾದಿನಿ ಫಸೀಲಾ ಎಂಬವರುಗಳು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿರುತ್ತಾಳೆ. ತಾಯಿ ಮಗಳಲ್ಲಿ ಮಾತನಾಡುತ್ತಿದ್ದಾಗ ಆಕೆಯಿಂದ ಪೆÇೀನ್ ಕಸಿದುಕೊಂಡ ಆಕೆಯ ಮಾವ ಅಲವಿ ಅವರು ಮಗಳನ್ನು ಕೊಲ್ಲವುದಾಗಿ ಬೆದರಿಸಿರುತ್ತಾರೆ. ಬಳಿಕ ತಾಯಿ ಜುಬೈದಾ ಅವರು ಮಗಳ ಬಳಿ ತೆರಳುತ್ತಿದ್ದಾಗ ಮಗಳಾದ ಫಾತಿಮತ್ ನಿಶಾನಾ ಮೃತಪಟ್ಟಿದ್ದಳು. ತನ್ನ ಮಗಳನ್ನು ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಾವ ಅಲವಿ, ಅತ್ತೆ ಆಯಷ, ನಾದಿನಿ ಪಾಸಿಲ ಅವರುಗಳು ಕೊಂದಿರುವುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/2026, ಕಲಂ 85, 103(1) ಆರ್/ಡಬ್ಲ್ಯು3(5) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.











0 comments:
Post a Comment