ಕಾಟಿಪಳ್ಳ : ಅಣ್ಣನ ಮಾತಿಗೆ ತಮ್ಮ ಡೋಂಟ್ ಕೇರ್, ಕೊಡಲಿಯಿಂದ ಹೊಡೆದು ಕೊಂದ ಅಣ್ಣ - Karavali Times ಕಾಟಿಪಳ್ಳ : ಅಣ್ಣನ ಮಾತಿಗೆ ತಮ್ಮ ಡೋಂಟ್ ಕೇರ್, ಕೊಡಲಿಯಿಂದ ಹೊಡೆದು ಕೊಂದ ಅಣ್ಣ - Karavali Times

728x90

20 July 2026

ಕಾಟಿಪಳ್ಳ : ಅಣ್ಣನ ಮಾತಿಗೆ ತಮ್ಮ ಡೋಂಟ್ ಕೇರ್, ಕೊಡಲಿಯಿಂದ ಹೊಡೆದು ಕೊಂದ ಅಣ್ಣ

 ಮಂಗಳೂರು, ಜುಲೈ 20, 2026 (ಕರಾವಳಿ ಟೈಮ್ಸ್) : ಅಣ್ಣನ ಮಾತಿಗೆ ಡೋಂಟ್ ಕೇರ್ ಮಾಡಿದ ತಮ್ಮನನ್ನು ಕೊಡಲಿಯಿಂದು ಹೊಡೆದು ಕೊಂದು ಹಾಕಿದ ಘಟನೆ ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು ಕೃಷ್ಣಮಠ ರಸ್ತೆಯ ಬಾಡಿಗೆ ಮನೆಯಲ್ಲಿ ಜುಲೈ 19 ರಂದು ರಾತ್ರಿ ಸಂಭವಿಸಿದೆ. 

ಮೃತನನ್ನು ಮೂಲತಃ ಕೊಪ್ಪಳ ಜಿಲ್ಲೆ ನಿವಾಸಿ, ಪ್ರಸ್ತುತ ಕಾಟಿಪಳ್ಳ ಗ್ರಾಮ, ಚೊಕ್ಕಬೆಟ್ಟು, ಕೃಷ್ಣಮಠ ರಸ್ತೆಯ ಶ್ರೀಮತಿ ರೇಖಾ ಎಂಬವರ ಬಾಡಿಗೆ ಮನೆಯಲ್ಲಿ ಕಳೆದ 5 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಿವಂಗತ ಪರಸಪ್ಪ ಎಂಬವರ ಪುತ್ರ ಮಲ್ಲಿಕಾರ್ಜುನ ಎಂದು ಹೆಸರಿಸಲಾಗಿದ್ದು, ಆರೋಪಿಯನ್ನು ಆತನ ಅಣ್ಣ ಸೋಮನಾಥ (21) ಎಂದು ಹೆಸರಿಸಲಾಗಿದೆ. 

ದಿವಂಗತ ಪರಸಪ್ಪ ಎಂಬವರ ಪತ್ನಿ ಶಿವಲೀಲಾ ಮತ್ತು ಆಕೆಯ ಇಬ್ಬರು ಮಕ್ಕಳಾದ ಸೋಮನಾಥ ಮತ್ತು ಮಲ್ಲಿಕಾರ್ಜುನ ಅವರು ಇಲ್ಲಿನ ರೇಖಾ ಅವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಜುಲೈ 19 ರಂದು ರಾತ್ರಿ 11 ಗಂಟೆಗೆ ಆರೋಪಿ ಸೋಮನಾಥ ಆತನ ತಮ್ಮನಾದ ಮಲ್ಲಿಕಾರ್ಜುನ ಎಂಬಾತ ಯಾವುದೋ ಹುಡುಗಿಯೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಸಮಯ ಆರೋಪಿ ಸಹೋದರ ವಿರೋಧ  ವ್ಯಕ್ತಪಡಿಸಿದ್ದಾನೆ. ಇದಕ್ಕೆ ತಮ್ಮನಾದ ಮಲ್ಲಿಕಾರ್ಜುನನು ಉಡಾಫೆಯಿಂದ ಆರೋಪಿಗೆ ಬೈದಿದ್ದರಿಂದ ಕೋಪಗೊಂಡ ಆರೋಪಿ ತನ್ನ ತಮ್ಮ ಮಲ್ಲಿಕಾರ್ಜುನನು ಮಲಗಿದ ನಂತರ ಮನೆಯಲ್ಲಿಯೇ ಇದ್ದ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿರುತ್ತಾನೆ. ಈ ಬಗ್ಗೆ ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸೋಮನಾಥನು ಕೃಷ್ಣಾಪುರ ಮಠ ರಸ್ತೆಯ ಪರಿಸರದಲ್ಲಿ ಪೆÇದೆಯಲ್ಲಿ ಅವಿತುಕೊಂಡಿದ್ದವನನ್ನು ಪತ್ತೆಮಾಡಿರುವ ಪೊಲೀಸರು ಆತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದು, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾಟಿಪಳ್ಳ : ಅಣ್ಣನ ಮಾತಿಗೆ ತಮ್ಮ ಡೋಂಟ್ ಕೇರ್, ಕೊಡಲಿಯಿಂದ ಹೊಡೆದು ಕೊಂದ ಅಣ್ಣ Rating: 5 Reviewed By: karavali Times
Scroll to Top