ಸಿದ್ದಕಟ್ಟೆ : ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿದ್ದಿ ಯೋಜನೆಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಗಿಡ ನಾಟಿ - Karavali Times ಸಿದ್ದಕಟ್ಟೆ : ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿದ್ದಿ ಯೋಜನೆಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಗಿಡ ನಾಟಿ - Karavali Times

728x90

20 July 2026

ಸಿದ್ದಕಟ್ಟೆ : ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿದ್ದಿ ಯೋಜನೆಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಗಿಡ ನಾಟಿ

ಬಂಟ್ವಾಳ, ಜುಲೈ 20, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಸಿದ್ದಕಟ್ಟೆ ವಲಯದ ಶ್ರೀ ಕ್ಷೇತ್ರ ಗರುಡ ಮಹಾಕಾಳಿ ದೇವಸ್ಥಾನ ಹರಳ ಇದರ ಆಶ್ರಯದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ಹರಳ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. 

ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಬ್ಯಾಂಕ್ ಅಧಿಕಾರಿ ರಮೇಶ್ ನಾಯಕ್ ಮಾತನಾಡಿ, ಧರ್ಮಸ್ಥಳದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ನಮ್ಮ ಮುಂದಿನ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಪೂಜ್ಯರು ಮಾಡಿದ ಕಾರ್ಯಕ್ರಮ ಯಾವುದೂ ಕೂಡ ಉತ್ತಮವಾಗಿಯೇ ಮೂಡಿಬಂದಿದೆ ಎಂದರು. 

ಜಗದೀಶ್ ಆಳ್ವ ಮಾತನಾಡಿ, ಪರಿಸರದ ಬಗ್ಗೆ ಹೆಚ್ಚಿನ ಗಮನ ನೀಡಿ ಪರಿಸರ ಉಳಿಸುವ ನಮ್ಮೆಲ್ಲರ ಹಕ್ಕು ಎಂದು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೊಟ್ಟದಡ್ಕ ಒಕ್ಕೂಟದ ಅಧ್ಯಕ್ಷ ಸದಾನಂದ ಶೆಟ್ಟಿ, ಜನಜಾಗೃತಿ ಸದಸ್ಯ ಸರಸ್ವತಿ ಆಳ್ವ, ಒಕ್ಕೂಟದ ಮಾಜಿ ಅಧ್ಯಕ್ಷರಾದ ಶಶಿಧರ್ ಆಚಾರ್ಯ, ಗಿರೀಶ್ ಶೆಟ್ಟಿ, ಹರಳ ಓಂ ಜನ ಹಿತಾಯ ಆಂಗ್ಲ ಮಾಧ್ಯಮ ಶಾಲೆಯ ರಂಜನ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು. 

ಸೇವಾ ಪ್ರತಿನಿಧಿ ಮಹೇಶ್ವರಿ ಸ್ವಾಗತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಭಾಸ್ಕರ್ ಎಂ ಕಾರ್ಯಕ್ರಮ ನಿರೂಪಿಸಿದರು. ಹರಳ ಸೇವಾ ಕೇಂದ್ರದ ವಿ ಎಲ್ ಎ ವಂದಿಸಿದರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಸಿದ್ದಕಟ್ಟೆ : ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿದ್ದಿ ಯೋಜನೆಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಗಿಡ ನಾಟಿ Rating: 5 Reviewed By: karavali Times
Scroll to Top