ಬಂಟ್ವಾಳ, ಜುಲೈ 20, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಕೈಕಂಬದ ಶಿಲ್ಪಾ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣzದೊಳಗೆ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಜುಲೈ 18 ರಂದು ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೆÇಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದ ದಾಳಿ ನಡೆಸಿದ್ದು, ಸ್ಥಳದಲ್ಲಿ ಚಂದ್ರಹಾಸ (45), ಮಹಮ್ಮದ್ ಶರೀಪ್ (45) ಹಾಗೂ ಹನುಮಂತಪ್ಪ (55) ಎಂಬವರುಗಳು ಕಂಡು ಬಂದಿದ್ದಾರೆ. ಅವರನ್ನು ವಿಚಾರಿಸಿದಾಗ ಅವರುಗಳು ಮದ್ಯವನ್ನು ಸೇವಿಸುತ್ತಿದ್ದುದು ದೃಢಪಟ್ಟಿದೆ. ಸ್ಥಳದಲ್ಲಿ ಮರದ ಟೇಬಲ್, 3 ಮಧ್ಯದ ಸ್ಯಾಚೆಟ್, ನೀರಿನ ಬಾಟ್ಲಿಗಳು ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment