ನೆಹರುನಗರ : ಮರ್ ಹೂಂ ನಸೀಮಾ ಬಾನು ಸ್ಮರಣಾರ್ಥ ಮಹಿಳಾ ಯಾತ್ರಿಕರ ನಮಾಝ್ ಕೊಠಡಿ ಹಾಗೂ ಮದ್ರಸ ಅಧ್ಯಾಪಕರ ವಾಸ್ತವ್ಯ ಕಟ್ಟಡ ಲೋಕಾರ್ಪಣೆ - Karavali Times ನೆಹರುನಗರ : ಮರ್ ಹೂಂ ನಸೀಮಾ ಬಾನು ಸ್ಮರಣಾರ್ಥ ಮಹಿಳಾ ಯಾತ್ರಿಕರ ನಮಾಝ್ ಕೊಠಡಿ ಹಾಗೂ ಮದ್ರಸ ಅಧ್ಯಾಪಕರ ವಾಸ್ತವ್ಯ ಕಟ್ಟಡ ಲೋಕಾರ್ಪಣೆ - Karavali Times

728x90

23 July 2026

ನೆಹರುನಗರ : ಮರ್ ಹೂಂ ನಸೀಮಾ ಬಾನು ಸ್ಮರಣಾರ್ಥ ಮಹಿಳಾ ಯಾತ್ರಿಕರ ನಮಾಝ್ ಕೊಠಡಿ ಹಾಗೂ ಮದ್ರಸ ಅಧ್ಯಾಪಕರ ವಾಸ್ತವ್ಯ ಕಟ್ಟಡ ಲೋಕಾರ್ಪಣೆ

ಬಂಟ್ವಾಳ, ಜುಲೈ 23, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಅಧೀನದಲ್ಲಿರುವ ನೆಹರು ನಗರದ ಬದ್ರಿಯಾ ಜುಮಾ ಮಸೀದಿಯ ಮದ್ರಸ ಉಸ್ತಾದರ ವಾಸ್ತವ್ಯದ ನೂತನ ಕಟ್ಟಡ ಹಾಗೂ ಮರ್ ಹೂಂ ನಸೀಮಾ ಬಾನು ಸ್ಮರಣಾರ್ಥ ನಿರ್ಮಿಸಲಾದ ಮಹಿಳಾ ಯಾತ್ರಿಕರ ನಮಾಝ್ ಕೊಠಡಿಯನ್ನು ಸಯ್ಯಿದ್ ಕೆ ಎಸ್ ಶಮೀಂ ತಂಙಳ್ ಕುಂಬೋಳ್ ಉದ್ಘಾಟಿಸಿದರು.

ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಬಿ ವೈ ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ನೆಹರುನಗರ ಬದ್ರಿಯಾ ಜುಮಾ ಮಸೀದಿ ಖತೀಬ್ ದಾವುದ್ ಇಸ್ಮಾಯಿಲ್ ಪೈಝಿ, ಅಕ್ಕರಂಗಡಿ ದಾರುಲ್ ಇಸ್ಲಾಂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ಹಮೀದ್ ಮಾಣಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಪಿ ಎಸ್ ಅಬ್ದುಲ್ ಹಮೀದ್, ಪ್ರಮುಖರಾದ ಹಾಜಿ ಎನ್ ಎಚ್ ಆದಂ ಫೈಝಿ, ಹಾಜಿ ಸೈಫುದ್ದೀನ್ ಮೊಹಮ್ಮದ್ ನಝರ್, ಕೆ ಎಚ್ ಅಬೂಬಕ್ಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಪಿ ಜೆ ಅಬ್ದುಲ್ ಹಮೀದ್ ನಝರ್, ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಙÂ, ಎಚ್ ಐ ಎಂ ಮದ್ರಸ ಮುಖ್ಯ ಶಿಕ್ಷಕ ಹನೀಫ್ ಮುಸ್ಲಿಯರ್, ನೆಹರುನಗರ ಬದ್ರಿಯಾ ಮದ್ರಸ ಮುಖ್ಯ ಶಿಕ್ಷಕ ರಶೀದ್ ಹನಿಫಿ, ನರಿಕೊಂಬು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಿಯಾಝ್ ನೆಹರುನಗರ, ಪ್ರಮುಖರಾದ ಎಚ್ ಎಚ್ ಹಫೀಝ್, ಪಿ ಎಂ ಇಕ್ಬಾಲ್, ಪಿ ಎಸ್ ಅಹ್ಮದ್ ಬಶೀರ್ ಜೆಟಿಟಿ, ಆದಂ ಹಾಜಿ, ಅಬ್ದುಲ್ ಸಲೀಂ, ಹಸನ್ ಹಾಜಿ ಮೊದಲಾದವರು ಭಾಗವಹಿಸಿದ್ದರು. .

ಇದೇ ವೇಳೆ ದಾನಿ ಮ್ಯಾನ್ ಆಂಡ್ ಮೋಡ ಸಂಸ್ಥೆಯ ಮಾಲಕ ಮುಹಮ್ಮದ್ ನಿಯಾಝ್ ಹಾಗೂ ಸೆಂಟ್ರಿಕ್ ಬಿಲ್ಡರ್ ಇದರ ಇಮ್ಮಿಯಾಝ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.

ಮಸೀದಿ ಉಪಾಧ್ಯಕ್ಷ ತಸ್ಲೀಂ ಆರಿಫ್ ಸ್ವಾಗತಿಸಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಝುಬೈರ್ ದಾರಿಮಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಪಿ ಜೆ ಅಬ್ದುಲ್ ರಹಿಮಾನ್ ವಂದಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ನೆಹರುನಗರ : ಮರ್ ಹೂಂ ನಸೀಮಾ ಬಾನು ಸ್ಮರಣಾರ್ಥ ಮಹಿಳಾ ಯಾತ್ರಿಕರ ನಮಾಝ್ ಕೊಠಡಿ ಹಾಗೂ ಮದ್ರಸ ಅಧ್ಯಾಪಕರ ವಾಸ್ತವ್ಯ ಕಟ್ಟಡ ಲೋಕಾರ್ಪಣೆ Rating: 5 Reviewed By: karavali Times
Scroll to Top