ಮಂಗಳೂರು, ಜುಲೈ 31, 2026 (ಕರಾವಳಿ ಟೈಮ್ಸ್) : ಕಂಕನಾಡಿ ನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 130/2025 ಪ್ರಕರಣದ ಆರೋಪಿ, ಮಂಗಳೂರು-ಕುಂಜತಬೈಲು ದೇವಿನಗರ ನಿವಾಸಿ, ಗಿಲ್ಬರ್ಟ್ ನೊರೊನ್ಹಾ ಅವರ ಪುತ್ರ ಸೋನು ಮ್ಯಾಕ್ಲಿನ್ ನೊರೊನ್ಹ (20) ಎಂಬಾತನಿಗೆ ಮಂಗಳೂರು ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ ಟಿ ಎಸ್ ಸಿ-2 ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್ ಅವರು ಕಲಂ 64 (2) (ಎಂ), 77 ಬಿ ಎನ್ ಎಸ್-2023, ಕಲಂ 6, 15, ಪೆÇೀಕ್ಸೋ ಮತ್ತು ಕಲಂ 66 (ಇ) ಐಟಿ ಆಕ್ಟ್) ಕಲಂಗಳಿಗೆ ಸಂಬಂಧಿಸಿದಂತೆ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ಸೋನು ಮ್ಯಾಕ್ಲಿನ್ ನೊರೊನ್ಹ ಎಂಬಾತ 2024ನೇ ಇಸವಿಯ ಫೆಬ್ರವರಿ ತಿಂಗಳಿನಿಂದ ನೊಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಮನವೊಲಿಸಿ, ನೊಂದ ಅಪ್ರಾಪ್ತ ಬಾಲಕಿ ಬಾಡಿಗೆ ನೆಲೆಯಲ್ಲಿ ವಾಸವಾಗಿದ್ದ ಶಕ್ತಿ ನಗರದ ಚಾಲುಕ್ಯ ಬಾರ್ ಬಳಿಯಿರುವ ಮನೆಯಲ್ಲಿ 2024ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ ಹಾಗೂ ಅಳಪೆ ಗ್ರಾಮದ ಕೆಂಬಾರು ಕೆ.ಇ.ಬಿ. ಮುಂಭಾಗವಿರುವ ಮನೆಯೊಂದಲ್ಲಿ 2024ನೇ ಇಸವಿಯ ನವೆಂಬರ್ ತಿಂಗಳಿನಿದ 2025ನೇ ಇಸವಿಯ ಜೂನ್ ತಿಂಗಳ ಮಧ್ಯೆ ಪದೇ ಪದೇ ಅತ್ಯಾಚಾರ ನಡೆಸಿರುತ್ತಾನೆ.
ಅಪ್ರಾಪ್ತ ಬಾಲಕಿ ಸ್ನಾನ ಗೃಹದಲ್ಲಿ ನಗ್ನ ಸ್ಥಿತಿಯಲ್ಲಿ ಸ್ನಾನ ಮಾಡುತ್ತಿರುವ ಸಮಯ ವೀಡಿಯೊ ಕಾಲ್ ಮಾಡಿ, ಅದನ್ನು ಸ್ಕ್ರೀನ್ ಶಾಟ್ ಮಾಡಿ ತನ್ನ ಮೊಬೈಲಿನಲ್ಲಿ ನೊಂದ ಅಪ್ರಾಪ್ತ ಬಾಲಕಿಯ ನಗ್ನ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡು, ಮುಂದೆ ದೈಹಿಕ ಸಂಪರ್ಕಕ್ಕೆ ಬಾರದೇ ಇದ್ದರೆ ಈ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಅಪ್ರಾಪ್ತ ಬಾಲಕಿಯನ್ನು, ಅವರ ತಾಯಿಯನ್ನು ಹಾಗೂ ಅಕ್ಕನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದನು.
ಈ ಪ್ರಕರಣದಲ್ಲಿ ಕಂಕನಾಡಿ ನಗರ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ ಅವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಅವರು ವಾದಿಸಿದ್ದರು. ನ್ಯಾಯಾಧೀಶರು ಆರೋಪಿಗೆ ಕಲಂ 6 ಪೋಕ್ಸೋ ಮತ್ತು ಕಲಂ 64 (2)(ಎಂ) ಬಿ ಎನ್ ಎಸ್ ಕಾಯ್ದೆಯಡಿ 20 ವರ್ಷ ಕಠಿಣ ಕಾರವಾಸ ಹಾಗೂ 50 ಸಾವಿರ ರೂಪಾಯಿ ದಂಡ, ಕಲಂ 77 ಬಿ ಎನ್ ಎಸ್ ಕಾಯ್ದೆಯಡಿ ಒಂದು ವರ್ಷ ಹಾಗೂ ಐದು ಸಾವಿರ ರೂಪಾಯಿ ದಂಡ, ಕಲಂ 15 ಪೋಕ್ಸೋ ಕಾಯ್ದೆಯಡಿ ಒಂದು ವರ್ಷ ಹಾಗೂ 5 ಸಾವಿರ ರೂಪಾಯಿ ದಂಡ, ಕಲಂ 66 (ಇ) ಐಟಿ ಕಾಯ್ದೆಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿರುತ್ತಾರೆ.











0 comments:
Post a Comment