ಜುಲೈ 5 ರಂದು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ - Karavali Times ಜುಲೈ 5 ರಂದು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ - Karavali Times

728x90

2 July 2026

ಜುಲೈ 5 ರಂದು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ, ಜುಲೈ 02, 2026 (ಕರಾವಳಿ ಟೈಮ್ಸ್) : ಕಳೆದ ಎಂಟು ವರ್ಷಗಳ ಹಿಂದೆ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ನೇತೃತ್ವದಲ್ಲಿ ಆರಂಭಗೊಂಡ ಬಂಟ್ವಾಳ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ 2025-26ನೇ ಸಾಲಿನಲ್ಲಿ  30 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಲಾದ ವಿವಿಧ ಸಮಾಜಮುಖಿ ಸೇವಾ ಚಟುವಟಿಕೆ ಮತ್ತು ಕ್ಲಬ್ಬಿನ ಸಾಧನೆ ಪರಿಗಣಿಸಿ ರೋಟರಿ ಜಿಲ್ಲೆ 3181ರಲ್ಲಿ ‘ಡೈಮಂಡ್ ಪ್ಲಸ್’ ಪ್ರಶಸ್ತಿ ದೊರೆತಿದೆ ಎಂದು ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಲೊರೆಟ್ಟೊ ಹೇಳಿದರು. 

ಜೂನ್ 2 ರಂದು ಬಿ ಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಒಟ್ಟು 55 ಮಂದಿ ಸದಸ್ಯರನ್ನು ಹೊಂದಿರುವ ನಮ್ಮ ಕ್ಲಬ್ ಬಂಟ್ವಾಳ ಕ್ಲಬ್ಬಿನ ನೇತೃತ್ವದಲ್ಲಿ ನರಿಕೊಂಬು ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಧ ಕಲಾವಿದರ ಮನೆ ನಿರ್ಮಾಣಕ್ಕೆ 1 ಲಕ್ಷ ರೂಪಾಯಿ ಮೊತ್ತದ ಆರ್ಥಿಕ ನೆರವು ಹಸ್ತಾಂತರಿಸಿದೆ ಎಂದರು. 

ಪ್ರತೀ ವರ್ಷ ಪಲ್ಸ್ ಪೆÇೀಲಿಯೋ ಸಹಿತ ರೋಟರಿ ದತ್ತಿ ನಿಧಿಗೆ ಸದಸ್ಯರು ಗರಿಷ್ಟ ಮೊತ್ತದ ದೇಣಿಗೆ ನೀಡುತ್ತಿದ್ದು, ಈಗಾಗಲೇ ಲೊರೆಟ್ಟೋದಲ್ಲಿ 1.50 ಲಕ್ಷ ರೂಪಾಯಿ ವೆಚ್ಚದಲ್ಲಿ ಉಚಿತ್ ಬಸ್ ತಂಗುದಾಣ ನಿರ್ಮಾಣ ಸಹಿತ ಆರಂಬೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿ ಲೋಕಾರ್ಪಣೆಗೊಂಡಿದೆ ಎಂದ ಅವರು, ಹಲವು ಮಂದಿ ಅನಾರೋಗ್ಯಪೀಡಿತರ ವೈದ್ಯಕೀಯ ಚಿಕಿತ್ಸೆಗಾಗಿ 50 ಸಾವಿರ ರೂಪಾಯಿ ಮೊತ್ತದ ಆರ್ಥಿಕ ನೆರವು ನೀಡಲಾಗಿದ್ದು, ವಿವಿಧ ಶಾಲೆಗಳಿಗೆ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಉಚಿತ ಪುಸ್ತಕ, ಬ್ಯಾಗ್, ಕೊಡೆ, ಸ್ಕ್ವಾಡ್ ಡ್ರೆಸ್, ಕಪಾಟು, ಧ್ವನಿವರ್ಧಕ, ಹಣ್ಣಿನ ಗಿಡ, ಕುಡಿಯುವ ನೀರಿನ ಶುದ್ಧೀಕರಣ ಘಟಕ ವಿತರಿಸಲಾಗಿದೆ ಎಂದರು. 

ವಿವಿಧ ಅಂಗನವಾಡಿ ಕೇಂದ್ರಗಳಿಗೆ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಧ್ವಜಸ್ಥಂಭ, ಕಪಾಟು, ಪೆÇೀಡಿಯಂ ಕೊಡುಗೆ ಮತ್ತು ಇಂಟರ್ ಲಾಕ್ ಅಳವಡಿಸಲಾಗಿದೆ. ಜಿಲ್ಲಾ ಮಟ್ಟದ ಚೆಸ್ ಟೂನರ್, ರಸ್ತೆ ಸುರಕ್ಷತೆ ಬಗ್ಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ, ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮ ದಿನಾಚರಣೆ ಪ್ರಯುಕ್ತ ಪೆÇಲೀಸ್ ಇಲಾಖೆ ಸಹಭಾಗಿತ್ವದಲ್ಲಿ ‘ರಾಷ್ಟ್ರೀಯ ಏಕತಾ ದಿವಸ್ ಓಟ’, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಜಾಗೃತಿ ಮಾಹಿತಿ ಶಿಬಿರ ನಡೆಸಲಾಗಿದೆ ಎಂದ ಅವರು ಮಂಗಳೂರು ಎ ಜೆ ಆಸ್ಪತ್ರೆ ಸಹಭಾಗಿತ್ವದಲ್ಲಿ ವಿವಿಧ ಸರಕಾರಿ ಮತ್ತು ಖಾಸಗಿ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಹೃದಯಾಘಾತ ಬಗ್ಗೆ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆ, ಬೇಸಿಕ್ ಲೈಫ್ ಸಪೆÇೀಟರ್ ಮತ್ತು ಸಿಪಿಆರ್ ಬಗ್ಗೆ ಪ್ರತ್ಯೇಕ ಮಾಹಿತಿ ಶಿಬಿರ ಹಾಗೂ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಸಿದ್ಧಕಟ್ಟೆ, ನರಿಕೊಂಬು ಮತ್ತು ರಾಯಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ತಪಾಸಣೆ ಶಿಬಿರ ನಡೆಸಲಾಗಿದ್ದು, ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ ವಿತರಣೆ, ವಿವಿಧ ಕಾಲೇಜುಗಳಲ್ಲಿ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರ ನಡೆಸಲಾಗಿದೆ. ಮಾತ್ರವಲ್ಲದೆ ಅವಿಭಜಿತ ಜಿಲ್ಲಾ ಮಟ್ಟದಲ್ಲಿ ರೋಟರಿ ಕಂಬಳ ಆಯೋಜನೆ, ಪಾಳುಬಿದ್ದ 10 ಎಕರೆ ಗದ್ದೆಯಲ್ಲಿ ಭತ್ತದ ಬೇಸಾಯ ನಡೆಸುವ ಮೂಲಕ ಗಮನ ಸೆಳೆದಿದೆ. ಒಟ್ಟು 8 ವರ್ಷಗಳ ಅವಧಿಯಲ್ಲಿ ಸುಮಾರು 2 ಕೋಟಿಗೂ ಮಿಕ್ಕಿದ ಮೊತ್ತಗಳ ವಿವಿಧ ಸೇವಾ ಚಟುವಟಿಕೆ ನಡೆಸಲಾಗಿದ್ದು, ಸತತ ಎರಡು ಬಾರಿ ‘ಡೈಮಂಡ್ ಪ್ಲಸ್’ ಪ್ರಶಸ್ತಿ ದೊರೆತಿದೆ ಎಂದವರು ವಿವರಿಸಿದರು. 

ಜುಲೈ 5 ರಂದು ಪದಗ್ರಹಣ

ನಮ್ಮ ಕ್ಲಬ್ಬಿನ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 5 ರಂದು ಭಾನುವಾರ ಸಂಜೆ ಗಂಟೆ 6.30ಕ್ಕೆ ನಡೆಯಲಿದ್ದು, ಮಾಜಿ ಜಿಲ್ಲಾ ಗವರ್ನರ್ ಡಾ ಕೆ ರವಿ ಅಪ್ಪಾಜಿ ಅವರು ಪದಗ್ರಹಣ ನೆರವೇರಿಸುವರು ಎಂದು ಇದೇ ವೇಳೆ ನಿಯೋಜಿತ ಅಧ್ಯಕ್ಷೆ ಗೀತಾ ಪಿ ಬಲ್ಲಾಳ್ ಮಾವಂತೂರು ಹೇಳಿದರು. ಮಾಜಿ ಜಿಲ್ಲಾ ಗವರ್ನರ್ ಎನ್ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಶ್ರುತಿ ಮಾಡ್ತಾ, ವಲಯ ಸೇನಾನಿ ಗಣೇಶ ಶೆಟ್ಟಿ ಗೋಳ್ತಮಜಲು, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು. 

ಈ ಸಂದರ್ಭ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಕಾರ್ಯದರ್ಶಿ ಮೋಹನ್ ಕೆ ಶ್ರೀಯಾನ್ ರಾಯಿ, ನಿಯೋಜಿತ ಕಾರ್ಯದರ್ಶಿ ರೂಪಾ ರಾಜೇಶ್ ಶೆಟ್ಟಿ ಸೀತಾಳ ಜೊತೆಗಿದ್ದರು.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಜುಲೈ 5 ರಂದು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ Rating: 5 Reviewed By: karavali Times
Scroll to Top