ರಸ್ತೆ ಬದಿ ತ್ಯಾಜ್ಯ ಎಸೆತ : ವ್ಯಕ್ತಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಕನ್ಯಾನ ಹಾಗೂ ವೇಣೂರು ಪಂಚಾಯತ್ - Karavali Times ರಸ್ತೆ ಬದಿ ತ್ಯಾಜ್ಯ ಎಸೆತ : ವ್ಯಕ್ತಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಕನ್ಯಾನ ಹಾಗೂ ವೇಣೂರು ಪಂಚಾಯತ್ - Karavali Times

728x90

9 July 2026

ರಸ್ತೆ ಬದಿ ತ್ಯಾಜ್ಯ ಎಸೆತ : ವ್ಯಕ್ತಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಕನ್ಯಾನ ಹಾಗೂ ವೇಣೂರು ಪಂಚಾಯತ್

ಬಂಟ್ವಾಳ, ಜುಲೈ 09, 2026 (ಕರಾವಳಿ ಟೈಮ್ಸ್) : ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಬೊಲ್ಪಾದೆ ರಸ್ತೆಯ ಕಳಂಜಿಮಲೆ ರಕ್ಷಿತಾರಣ್ಯ ಬದಿಯಲ್ಲಿ ತ್ಯಾಜ್ಯ ಎಸೆದು ಸ್ವಚ್ಛತಾ ನೀತಿ ಉಲ್ಲಂಘಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ  ಗ್ರಾಮ ಪಂಚಾಯತ್  4 ಸಾವಿರ  ರೂಪಾಯಿ ದಂಡ ವಿಧಿಸಿದೆ. ತ್ಯಾಜ್ಯ ಎಸೆಯುವುದು ಪುನರಾರ್ತಿವಾದರೆ ಕಾನೂನು ಕ್ರಮದ ಬಗ್ಗೆ  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ. 

ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಿರುವ ಬಗ್ಗೆ ಪರಿಶೀಲನೆ ನಡೆಸಿ ಎಲ್ಲೆಂದರಲ್ಲಿ ಕಸ ಬಿಸಾಡಿರುವ ಅಂಗಡಿ ಮಾಲೀಕರೊಬ್ಬರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಇನ್ನು ಮುಂದೆಯೂ ಕೂಡ ಯಾರಾದರೂ ಸಮರ್ಪಕವಾಗಿ ತ್ಯಾಜ್ಯ/ ಕಸವನ್ನು ವಿಲೇವಾರಿ ಮಾಡದೇ ರಸ್ತೆ ಬದಿಯಲ್ಲಿ ಕಸವನ್ನು ತಂದು ಬಿಸಾಡಿದಲ್ಲಿ ದಂಡ ವಿಧಿಸಲಾಗುತ್ತದೆ. ಹಾಗೇ ಯಾರಾದರೂ ಎಲ್ಲೆಂದರಲ್ಲಿ ಕಸವನ್ನು ಬಿಸಾಡುವುದನ್ನು ಕಂಡಲ್ಲಿ ತಕ್ಷಣ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿ ಸ್ವಚ್ಛತೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಪಂಚಾಯತ್ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ರಸ್ತೆ ಬದಿ ತ್ಯಾಜ್ಯ ಎಸೆತ : ವ್ಯಕ್ತಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಕನ್ಯಾನ ಹಾಗೂ ವೇಣೂರು ಪಂಚಾಯತ್ Rating: 5 Reviewed By: karavali Times
Scroll to Top