ಖುವ್ವತುಲ್ ಇಸ್ಲಾಂ ಕುತುಬಿಯ್ಯತ್ ಕಮಿಟಿ ನೂತನ ಅಧ್ಯಕ್ಷರಾಗಿ ಕರೀಂ ಬೊಳ್ಳಾಯಿ ಆಯ್ಕೆ - Karavali Times ಖುವ್ವತುಲ್ ಇಸ್ಲಾಂ ಕುತುಬಿಯ್ಯತ್ ಕಮಿಟಿ ನೂತನ ಅಧ್ಯಕ್ಷರಾಗಿ ಕರೀಂ ಬೊಳ್ಳಾಯಿ ಆಯ್ಕೆ - Karavali Times

728x90

26 July 2026

ಖುವ್ವತುಲ್ ಇಸ್ಲಾಂ ಕುತುಬಿಯ್ಯತ್ ಕಮಿಟಿ ನೂತನ ಅಧ್ಯಕ್ಷರಾಗಿ ಕರೀಂ ಬೊಳ್ಳಾಯಿ ಆಯ್ಕೆ

ಬಂಟ್ವಾಳ, ಜುಲೈ 26 2026 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮದ ಬೊಳ್ಳಾಯಿ ಖುವತ್ತುಲ್ ಇಸ್ಲಾಂ ಕುತುಬಿಯ್ಯತ್ ಕಮಿಟಿಯ ನೂತನ ಅಧ್ಯಕ್ಷರಾಗಿ ಎನ್ ಅಬ್ದುಲ್ ಕರೀಂ ಬೊಳ್ಳಾಯಿ ಆಯ್ಕೆಯಾಗಿದ್ದಾರೆ. 

ಕಮಿಟಿ ಕಚೇರಿಯಲ್ಲಿ ಬದ್ರಿಯಾ ಜುಮಾ ಮಸೀದಿ ಖತೀಬ್ ಕೆ ಎಚ್ ಯು ಶಾಪಿ ಮದನಿ ಅಲ್ ಅಝ್-ಹರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಅಯ್ಕೆ ಪ್ರಕ್ರಿಯೆ ನಡೆದಿದೆ. ಮುಖ್ಯ ಅತಿಥಿಗಳಾಗಿ ಮಸೀದಿ ಅಧ್ಯಕ್ಷ ಬಿ ಎಸ್ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಬಿ ಎಸ್ ಅಬ್ದುಲ್ ರಝಾಕ್ ಭಾಗವಹಿಸಿದ್ದರು. 

ಉಪಾಧ್ಯಕ್ಷರಾಗಿ ಕೆ ಎಚ್ ಹೈದರ್, ಪ್ರಧಾನ ಕಾರ್ಯದರ್ಶಿಯಾಗಿ ಬಿ ಎ ಹನೀಫ್, ಜೊತೆ ಕಾರ್ಯದರ್ಶಿಗಳಾಗಿ ಕೆ ಎಂ ರಫೀಕ್ ಹಾಗೂ ಎಸ್ ಅಬೂಬಕ್ಕರ್, ಕೋಶಾಧಿಕಾರಿಯಾಗಿ ಬಿ ಎ ಇಸ್ಹಾಕ್, ಲೆಕ್ಕಪರಿಶೋಧಕರಾಗಿ ಬಿ ಎ ಉಮರಬ್ಬ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ ಎಸ್ ಅಬೂಬಕ್ಕರ್, ಬಿ ಬಿ ಲತೀಫ್ ಸಲ್ಮಾನ್ ಐಡಿಯಲ್, ನೌಶಾದ್, ಎಂ ಆರ್ ಮುಂಝೀರ್, ಅಬ್ಬಾಸ್, ಬಿ ಐ ಬಿ ಹನೀಫ್, ಎನ್ ಇಸಾಕ್, ಬಿ ಕೆ ಶರೀಫ್ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಕಮಿಟಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಖುವ್ವತುಲ್ ಇಸ್ಲಾಂ ಕುತುಬಿಯ್ಯತ್ ಕಮಿಟಿ ನೂತನ ಅಧ್ಯಕ್ಷರಾಗಿ ಕರೀಂ ಬೊಳ್ಳಾಯಿ ಆಯ್ಕೆ Rating: 5 Reviewed By: karavali Times
Scroll to Top