ಪೆರ್ನೆ : ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಕೂಲಿ ಕಾರ್ಮಿಕ ಮೃತ್ಯು - Karavali Times ಪೆರ್ನೆ : ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಕೂಲಿ ಕಾರ್ಮಿಕ ಮೃತ್ಯು - Karavali Times

728x90

9 July 2026

ಪೆರ್ನೆ : ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಕೂಲಿ ಕಾರ್ಮಿಕ ಮೃತ್ಯು

ಬಂಟ್ವಾಳ, ಜುಲೈ 09, 2026 (ಕರಾವಳಿ ಟೈಮ್ಸ್) : ತಾಲೂಕಿನ ಪೆರ್ನೆ ಗ್ರಾಮದ ನೂಜಿನಡ್ಕ ಎಂಬಲ್ಲಿ ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಚಂದಪ್ಪ ಪೂಜಾರಿ ಅವರು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. 

ಚಂದಪ್ಪ ಅವರು ನೂಜಿನಡ್ಕ ಪ್ರದೇಶದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮರದ ಗೆಲ್ಲುಗಳನ್ನು ಕತ್ತರಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮರದ ಗೆಲ್ಲು ಸಮೀಪದಲ್ಲಿದ್ದ ವಿದ್ಯುತ್ ತಂತಿಗೆ ತಗುಲಿದ್ದು, ವಿದ್ಯುತ್ ಪ್ರವಹಿಸಿ ಚಂದಪ್ಪ ಪೂಜಾರಿ ಅವರಿಗೆ ತೀವ್ರ ವಿದ್ಯುತ್ ಆಘಾತ ಉಂಟಾಗಿ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಗಮನಿಸಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪೆರ್ನೆ : ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಕೂಲಿ ಕಾರ್ಮಿಕ ಮೃತ್ಯು Rating: 5 Reviewed By: karavali Times
Scroll to Top