ಮಂಗಳೂರು, ಜುಲೈ 30, 2026 (ಕರಾವಳಿ ಟೈಮ್ಸ್) : ಕರಾವಳಿಯ ಪ್ರತಿಷ್ಠಿತ ಸಾರಿಗೆ ಉದ್ಯಮಿ ಮಹೇಶ್ ಮೋಟರ್ಸ್ ಮಾಲಕ ಎ.ಕೆ ಜಯರಾಮ ಶೇಖ ಅವರ ಪುತ್ರ ಮಹೇಶ್ ಶೇಖ (49) ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 29 ರಂದು ನಿಧನರಾಗಿದ್ದಾರೆ.
ಮೃತರು ತಂದೆ, ತಾಯಿ, ಪತ್ನಿ, ಪುತ್ರಿ, ಅಣ್ಣ, ಅಕ್ಕ ಹಾಗೂ ತಂಗಿ ಸಹಿತ ಅಪಾರ ಸಂಖ್ಯೆಯ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜುಲೈ 30 ರಂದು ಬೆಳಿಗ್ಗೆ ಮಂಗಳೂರು-ಕುಲಶೇಖರದ ಜ್ಯೋತಿ ಪ್ರಕಾಶ ನಿವಾಸದಲ್ಲಿ ನೆರವೇರಿದೆ ಎಂದು ತಿಳಿದು ಬಂದಿದೆ.











0 comments:
Post a Comment