ಆಟಿ ಅಮಾವಾಸ್ಯೆ ಹಿನ್ನಲೆ : ನರಹರಿ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯಕ್ ಭೇಟಿ - Karavali Times ಆಟಿ ಅಮಾವಾಸ್ಯೆ ಹಿನ್ನಲೆ : ನರಹರಿ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯಕ್ ಭೇಟಿ - Karavali Times

728x90

12 August 2026

ಆಟಿ ಅಮಾವಾಸ್ಯೆ ಹಿನ್ನಲೆ : ನರಹರಿ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯಕ್ ಭೇಟಿ

ಬಂಟ್ವಾಳ, ಆಗಸ್ಟ್ 12, 2026 (ಕರಾವಳಿ ಟೈಮ್ಸ್) : ಆಟಿ ಅಮಾವಾಸ್ಯೆಯ ಪ್ರಯುಕ್ತ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಬೋಳಂಗಡಿ ನರಹರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಕ್ಷೇತ್ರದಲ್ಲಿ ನಡೆದಿರುವ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಆಡಳಿತ ಮಂಡಳಿಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ನರಹರಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಪೂರ್ಣಗೊಂಡಿದ್ದು, ಡಾಮರೀಕರಣಗೊಂಡ ರಸ್ತೆಯನ್ನು ಶಾಸಕರು ವೀಕ್ಷಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ ಪ್ರಶಾಂತ್ ಮಾರ್ಲ ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಆಟಿ ಅಮಾವಾಸ್ಯೆ ಹಿನ್ನಲೆ : ನರಹರಿ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯಕ್ ಭೇಟಿ Rating: 5 Reviewed By: karavali Times
Scroll to Top