ಬಂಟ್ವಾಳ, ಆಗಸ್ಟ್ 12, 2026 (ಕರಾವಳಿ ಟೈಮ್ಸ್) : ಪದವಿಪೂರ್ವ ಕಾಲೇಜು ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆಯು ಸಜಿಪಮೂಡ ಕಾಲೇಜಿನಲ್ಲಿ ಆಗಸ್ಟ್ 12 ರಂದು ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಡಾ ಎನ್ ಎಸ್ ಜೈರಾಬಿ ಮಾತನಾಡಿ, ಕ್ರೀಡಾಕೂಟದ ಮಹತ್ವವನ್ನು ತಿಳಿಸಿದರಲ್ಲದೆ ಕ್ರೀಡಾಕೂಟಕ್ಕೆ ಸರ್ವರ ಸಹಕಾರ ಕೋರಿದರು.
ಕಾಲೇಜು ಕಾರ್ಯಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ ಮಾತನಾಡಿ, ಕ್ರೀಡೆಯ ಯಶಸ್ಸಿಗಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಾಲೂಕು ಕ್ರೀಡಾ ಸಂಯೋಜಕ ನಿತಿನ್ ಕೊಡಿಯಾ ಪೆರ್ನೆ ಆಟೋಟ ಸ್ಪರ್ಧೆಗಳನ್ನು ಹಂಚಿಕೆ ಮಾಡಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಸಾಯಿರಾಮ್ ಕ್ರೀಡಾಕೂಟದ ರೂಪುರೇಷೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯ ವಿಶ್ವನಾಥ ಕೊಟ್ಟಾರಿ, ಉಪನ್ಯಾಸಕರಾದ ಸುರೇಶ್ ನಂದರಬೆಟ್ಟು, ದೈಹಿಕ ಶಿಕ್ಷಣ ಉಪನ್ಯಾಸಕ ವಸಂತ ಅಡ್ಯನಡ್ಕ, ಕಾಲೇಜು ಉಪನ್ಯಾಸಕರಾದ ಬಾಲಕೃಷ್ಣ ನಾಯ್ಕ್ ಬೆಳ್ಳಾರೆ, ಬಾಲಕೃಷ್ಣ ಎನ್ ವಿ, ಸುರೇಶ ಐತಾಳ್, ಶೋಭಾ, ವೇದಾವತಿ, ಸ್ಫೂರ್ತಿ, ಲತಾ, ಸಂಜೀವಣ್ಣ ಹಾಗೂ ಇತರ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು. ಉಪನ್ಯಾಸಕರಾದ ಗಾಯತ್ರಿ ಸ್ವಾಗತಿಸಿ, ಸುಂದರಿ ಬೆಲ್ಚಡ್ತಿ ವಂದಿಸಿದರು. ಭಾರತೀ ಕಾರ್ಯಕ್ರಮ ನಿರೂಪಿಸಿದರು.












0 comments:
Post a Comment