ಬೋಳಂತೂರು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ, ಕಾರು ಚಾಲಕ ಪರಾರಿ - Karavali Times ಬೋಳಂತೂರು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ, ಕಾರು ಚಾಲಕ ಪರಾರಿ - Karavali Times

728x90

13 August 2026

ಬೋಳಂತೂರು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ, ಕಾರು ಚಾಲಕ ಪರಾರಿ

ಬಂಟ್ವಾಳ, ಆಗಸ್ಟ್ 13, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಬೋಳಂತೂರು-ಎನ್ ಸಿ ರೋಡು ಎಂಬಲ್ಲಿ ಆಗಸ್ಟ್ 11 ರಂದು ಅಪರಾಹ್ನ ವೇಳೆ ಸಂಭವಿಸಿದೆ.

ಗಾಯಗೊಂಡ ಸ್ಕೂಟರ್ ಸವಾರರನ್ನು ಮೊಹಮ್ಮದ್ ಇಸ್ಮಾಯಿಲ್ ಕಲ್ಲಡ್ಕ (43) ಹಾಗೂ ಸಹಸವಾರೆ ಝೀನತ್ ಎಂದು ಹೆಸರಿಸಲಾಗಿದೆ. ಮುಹಮ್ಮದ್ ಮುಸ್ತಫಾ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. 

ಅಪಘಾತದಿಂದ ಗಾಯಗೊಂಡ ಮೊಹಮ್ಮದ್ ಇಸ್ಮಾಯಿಲ್ ಕಲ್ಲಡ್ಕ ಹಾಗೂ ಝೀನತ್ ಅವರು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. 

ಆರೋಪಿ ಕಾರು ಚಾಲಕ ಮೊಹಮ್ಮದ್ ಮುಸ್ತಫ ಅವರು ತಿಳಿ ಹಸಿರು ಬಣ್ಣದ ಬ್ರೀಜ್ ಕಾರಿನಲ್ಲಿ ಅಬ್ದುಲ್ ಸಲೀಂ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಬೊಳಂತೂರು-ಕಲ್ಲಡ್ಕ ರಸ್ತೆಯಲ್ಲಿ ಎನ್ ಸಿ ರೋಡ್ ಕಡೆಯಿಂದ ಕಲ್ಲಡ್ಕ ಕಡೆಗೆ ಚಲಾಯಿಸಿಕೊಂಡು ಹೋಗಿ ಬೊಳಂತೂರು ಎಂಬಲ್ಲಿ ಕೊಕ್ಕಪುಣಿ ಎಂಬಲ್ಲಿ ಅಜಾಗರೂಕತೆ ಹಾಗೂ ದುಡುಕುತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಸ್ಕೂಟರ್ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಆರೋಪಿ ಕಾರು ಚಾಲಕ ಮೊಹಮ್ಮದ್ ಮುಸ್ತಫನು ಅಪಘಾತದಿಂದ ನೆಲಕ್ಕೆ ಬಿದ್ದಿರುವುದನ್ನು ನೋಡಿಕೊಂಡು ಕಾರು ನಿಲ್ಲಿಸದೇ ಹಾಗೂ ಯಾವುದೇ ರೀತಿಯ ಚಿಕಿತ್ಸೆಯನ್ನು ಕೊಡಿಸದೇ ಹತ್ತಿರದ ಪೆÇಲೀಸ್ ಠಾಣೆಗೆ ಮಾಹಿತಿಯನ್ನೂ ನೀಡದೇ ಕಾರು ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂದು ಇಸ್ಮಾಯಿಲ್ ಅವರು ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬೋಳಂತೂರು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ, ಕಾರು ಚಾಲಕ ಪರಾರಿ Rating: 5 Reviewed By: karavali Times
Scroll to Top