ಸೂರಿಕುಮೇರು : ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯಲ್ಲಿ ಪಲ್ಟಿಯಾದ ಕಾರು, ಪ್ರಯಾಣಿಕರು ಪಾರು - Karavali Times ಸೂರಿಕುಮೇರು : ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯಲ್ಲಿ ಪಲ್ಟಿಯಾದ ಕಾರು, ಪ್ರಯಾಣಿಕರು ಪಾರು - Karavali Times

728x90

6 August 2026

ಸೂರಿಕುಮೇರು : ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯಲ್ಲಿ ಪಲ್ಟಿಯಾದ ಕಾರು, ಪ್ರಯಾಣಿಕರು ಪಾರು

ಬಂಟ್ವಾಳ, ಆಗಸ್ಟ್ 06, 2026 (ಕರಾವಳಿ ಟೈಮ್ಸ್) : ಕಾರೊಂದು ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯಲ್ಲೇ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಸುರಿಕುಮೇರು ಸಮೀಪದ ಹಿಂದೂಸ್ತಾನ್ ಪೆಟ್ರೋಲ್ ಪಂಪ್ ಬಳಿ ಗುರುವಾರ ಸಂಜೆ ಸಂಭವಿಸಿದೆ. ಅಪಘಾತದಿಂದ ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. 

ಮಂಗಳೂರಿ£ಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು ಸುರಿಕುಮೇರು ಸಮೀಪದ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿ ಗಮನಕ್ಕೆ ಬಾರದೆ ಚಾಲಕನ ನಿಯಂತ್ರಣ ಮೀರಿ ಈ ಅಪಘಾತ ಸಂಭವಿಸಿದೆ. ಬಿ ಸಿ ರೋಡ-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಕೆಲವು ಕಡೆ ಅವ್ಯವಸ್ಥೆಗಳು ಇವೆ. ಈ ಬಗ್ಗೆ ವಾಹನ ಚಾಲಕರು ಗಮನದಲ್ಲಿಟ್ಟು ಸುರಕ್ಷಿತ ಚಾಲನೆ ನಡೆಸುವಂತೆ ಟ್ರಾಫಿಕ್ ಪೊಲೀಸರು ಹಾಗೂ ಹೆದ್ದಾರಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸೂರಿಕುಮೇರು : ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯಲ್ಲಿ ಪಲ್ಟಿಯಾದ ಕಾರು, ಪ್ರಯಾಣಿಕರು ಪಾರು Rating: 5 Reviewed By: karavali Times
Scroll to Top