ಬಂಟ್ವಾಳ, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸರಪಾಡಿ ನಿವಾಸಿ ಜಯಂತ್ (47) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಇವರ 16 ವರ್ಷ ಪ್ರಾಯದ ಅಪ್ರಾಪ್ತ ಮಗಳು ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಕೆಲ ದಿನಗಳ ಹಿಂದಿನಿಂದ ಮಧ್ಯ ವಯಸ್ಸಿನ ಅಪರಿಚಿತರಾದ ಆರೋಪಿ ಬಾಲಕಿಯನ್ನು ಬಸ್ಸಿನಲ್ಲಿ ಬರುವಾಗ ಹಿಂಬಾಲಿಸುತ್ತಿದ್ದು, ಆಗಸ್ಟ್ 19 ರಂದು ಸಂಜೆ, ಬಾಲಕಿಯು ಕಲ್ಲಡ್ಕ ಬಸ್ ನಿಲ್ದಾಣಕ್ಕೆ ಬಂದಾಗ, ಸದ್ರಿ ಆರೋಪಿ ಅಲ್ಲಿ ಬಾಲಕಿಯನ್ನೇ ಗಮನಿಸುತ್ತಿದ್ದು, ಇದರಿಂದ ಭಯಗೊಂಡ ಬಾಲಕಿ ತಾಯಿ ಕೆಲಸ ಮಾಡುತ್ತಿದ್ದಲ್ಲಿಗೆ ಬಂದು ತಿಳಿಸಿರುತ್ತಾಳೆ. ತಾಯಿಯು ತನ್ನ ಕಛೇರಿಯ ಮಾಲಿಕರೊಂದಿಗೆ ಬಸ್ ನಿಲ್ದಾಣದ ಬಳಿ ಬಂದಾಗ ಆರೋಪಿ ಅಲ್ಲಿದ್ದ. ಆತನನ್ನು ವಿಚಾರಿಸಿದಾಗ ತನ್ನ ಹೆಸರು ಜಯಂತ್ ಎಂಬುದಾಗಿ ತಿಳಿಸಿ ಅಲ್ಲಿಂದ ತೆರಳಿರುತ್ತಾನೆ ಎಂದು ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಜಯಂತ್ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.











0 comments:
Post a Comment