ಅಪ್ರಾಪ್ತ ಶಾಲಾ ಬಾಲಕಿಯ ಅತ್ಯಾಚಾರ : ರಿಕ್ಷಾ ಚಾಲಕನ ಬಂಧಿಸಿದ ವೇಣೂರು ಪೊಲೀಸರು - Karavali Times ಅಪ್ರಾಪ್ತ ಶಾಲಾ ಬಾಲಕಿಯ ಅತ್ಯಾಚಾರ : ರಿಕ್ಷಾ ಚಾಲಕನ ಬಂಧಿಸಿದ ವೇಣೂರು ಪೊಲೀಸರು - Karavali Times

728x90

21 August 2026

ಅಪ್ರಾಪ್ತ ಶಾಲಾ ಬಾಲಕಿಯ ಅತ್ಯಾಚಾರ : ರಿಕ್ಷಾ ಚಾಲಕನ ಬಂಧಿಸಿದ ವೇಣೂರು ಪೊಲೀಸರು

ವೇಣೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಶಾಲಾ ಬಾಲಕಿಯನ್ನು ಅತ್ಯಾಚಾರ ನಡೆಸಿದ ಪ್ರಕರಣದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ವೇಣೂರು ನಿವಾಸಿ, ಅಟೊ ಚಾಲಕ ಜಮಾಲುದ್ದೀನ್ ಎಂದು ಹೆಸರಿಸಲಾಗಿದೆ. ಈತ 14 ವರ್ಷ ಪ್ರಾಯದ ಅಪ್ರಾಪ್ತ ಶಾಲಾ ಬಾಲಕಿಯನ್ನು ತನ್ನ ಅಟೋ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಆರೋಪಿಯು ಅನುಚಿತವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಬಾಲಕಿಯು ಪ್ರತಿರೋಧಿಸಿದಾಗ ಆರೋಪಿಯು ಜೀವಬೆದರಿಕೆ ಒಡ್ಡಿರುತ್ತಾನೆ. ಇದರಿಂದಾಗಿ ಹೆದರಿದ್ದ ಬಾಲಕಿ ಆತನ ವರ್ತನೆಯ ಬಗ್ಗೆ ಯಾರಿಗೂ ತಿಳಿಸಿರುವುದಿಲ್ಲ. ಮುಂದುವರಿದು ಆಗಸ್ಟ್ 13 ರಂದು ಸಂಜೆ ಬಾಲಕಿಯು ಆಕೆಯ ಮನೆಯಲ್ಲಿ ಒಬ್ಬಳೇ ಇದ್ದಾಗ, ಮನೆಗೆ ಬಂದ ಆರೋಪಿಯು ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿರುತ್ತಾನೆ ಎಂಬುದಾಗಿ ಸಂತ್ರಸ್ತ ಆಗಸ್ಟ್ 15 ಂದು ನೀಡಿದ ದೂರಿನಂತೆ ಆರೋಪಿ ವಿರುದ್ದ ವೇಣೂರು ಪೆÇಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಪ್ರಾಪ್ತ ಶಾಲಾ ಬಾಲಕಿಯ ಅತ್ಯಾಚಾರ : ರಿಕ್ಷಾ ಚಾಲಕನ ಬಂಧಿಸಿದ ವೇಣೂರು ಪೊಲೀಸರು Rating: 5 Reviewed By: karavali Times
Scroll to Top