ಬಂಟ್ವಾಳ, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ಬಾಳ್ತಿಲ ಗ್ರಾಮದ ಕಲ್ಲಡ್ಕ ಸಮೀಪದ ಕುದ್ರಬೆಟ್ಟು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಆಗಸ್ಟ್ 22 ರಂದು ಹೊಡೆದಾಡಿಕೊಂಡ ಇತ್ತಂಡಗಳ ವಿರುದ್ದ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ಪುತ್ತೂರು ತಾಲೂಕು, ಕಬಕ ನಿವಾಸಿ, ಟೆಂಪೋ ಚಾಲಕ ಶ್ರೀಧರ್ (38) ಮತ್ತು ಅವರ ಜೊತೆಗಿದ್ದ ಮಂಗಳೂರು-ಕಪಿತಾನಿಯೋ ನಿವಾಸಿ ಸಂತೋಷ್ ಕುಮಾರ್ ಕೆ (46) ಹಾಗೂ ಕಾರಿನಲ್ಲಿದ್ದ ಬೆಂಗಳೂರು ಮೂಲದ ನಿವಾಸಿಗಳಾದ ಅಜ್ಮೀನ್ ಖಾನ್, ಶೇಖ್ ಫಹಾದ್ ಪಾಶ (29), ಸೆಯ್ಯದ್ ಜೇಶನ್ ಅಹ್ಮದ್ (24), ಇಬ್ರಾಹಿಂ ಶರೀಫ್ (24), ಜೋಯ ತಸ್ಕೀನ್ (20) ಮತ್ತು ಇತರರು ಎಂದು ಹೆಸರಿಸಲಾಗಿದೆ.
ಆ 22 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಟ ನಡೆಸುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುತ್ತಿರುವುದು ಕಂಡು ಬಂದಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಗಲಾಟೆ ನಿಲ್ಲಿಸಿದ್ದು, ಬಳಿಕ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.





















0 comments:
Post a Comment