ಪುತ್ತೂರು ಝೆರಾಕ್ಸ್ ಅಂಗಡಿ ಪ್ರಮಾದದಿಂದ ಘರ್ಷಣೆ : ಸೀಸಿ ಟಿವಿ ಫೂಟೇಜ್ ಸಂಗ್ರಹಿಸಿ ಕ್ರಮ, ವದಂತಿ ಹಬ್ಬಿದರೆ ಕಠಿಣ ಕ್ರಮ : ಜಿಲ್ಲಾ ಎಸ್ಪಿ ಎಚ್ಚರಿಕೆ - Karavali Times ಪುತ್ತೂರು ಝೆರಾಕ್ಸ್ ಅಂಗಡಿ ಪ್ರಮಾದದಿಂದ ಘರ್ಷಣೆ : ಸೀಸಿ ಟಿವಿ ಫೂಟೇಜ್ ಸಂಗ್ರಹಿಸಿ ಕ್ರಮ, ವದಂತಿ ಹಬ್ಬಿದರೆ ಕಠಿಣ ಕ್ರಮ : ಜಿಲ್ಲಾ ಎಸ್ಪಿ ಎಚ್ಚರಿಕೆ - Karavali Times

728x90

21 August 2026

ಪುತ್ತೂರು ಝೆರಾಕ್ಸ್ ಅಂಗಡಿ ಪ್ರಮಾದದಿಂದ ಘರ್ಷಣೆ : ಸೀಸಿ ಟಿವಿ ಫೂಟೇಜ್ ಸಂಗ್ರಹಿಸಿ ಕ್ರಮ, ವದಂತಿ ಹಬ್ಬಿದರೆ ಕಠಿಣ ಕ್ರಮ : ಜಿಲ್ಲಾ ಎಸ್ಪಿ ಎಚ್ಚರಿಕೆ

 ಪುತ್ತೂರು, ಆಗಸ್ಟ್ 22, 2026 (ಕರಾವಳಿ ಟೈಮ್ಸ್) :  ಪುತ್ತೂರು-ದರ್ಬೆಯ ಝೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಮಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಆಗಸ್ಟ್ 21 ರಂದು ಮಧ್ಯಾಹ್ನ ವೇಳೆ ನಡೆದಿದೆ.

ಆಗಸ್ಟ್ 21 ರಂದು ಮಧ್ಯಾಹ್ನ ವೇಳೆ ಸುಳ್ಯ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬವರುಗಳು ಪುತ್ತೂರು ದರ್ಭೆ ಎಂಬಲ್ಲಿರುವ ಅಂಜನಾ ಪೈ ಎಂಬವರ “Dream destination digital seva Kendra” ಎಂಬ ಆಂಗಡಿಗೆ ತೆರಳಿ ಕೆಲವು ದಾಖಲಾತಿಗಳನ್ನು Xerox & Lamination  ಮಾಡಲು ನೀಡಿರುತ್ತಾರೆ.  ಈ ಪೈಕಿ ಒಂದು  ದಾಖಲೆ ಪತ್ರ ತಾಂತ್ರಿಕ ದೋಷದಿಂದ ಸುಟ್ಟುಹೋಗಿದ್ದು, ಸದ್ರಿ ವಿಷಯದಲ್ಲಿ ಮುಬಾಶಿರ, ಫಾತೀಮಾ, ಮುಬಾಶಿರ್ ಅವರುಗಳಿಗೆ ಹಾಗೂ ಸದ್ರಿ ಅಂಗಡಿಯ ಅಂಜನಾ ಪೈ ಮತ್ತು ಅವರ ಮಗ ಸುದರ್ಶನ್ ಪೈ ಎಂಬವರುಗಳ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಜನರು ಗುಂಪು ಸೇರಿದ್ದು, ಸ್ಥಳಕ್ಕೆ ಧಾವಿಸಿದ ಪುತ್ತೂರು ನಗರ ಠಾಣಾ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದು  ಎರಡೂ ಕಡೆಯವರಿಗೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದಾರೆ. ವಿಚಾರಣೆಗಾಗಿ  ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆ ತರುವ ವೇಳೆ ಅಲ್ಲಿ ಸೇರಿದ್ದ ಕೆಲವು ಜನರು ತಡೆಯೊಡ್ಡಿರುತ್ತಾರೆ. ಸದ್ರಿ ಘಟನೆಗೆ ಸಂಬಂಧಿಸಿದಂತೆ ದೂರು ಹಾಗೂ ಪ್ರತಿ ದೂರು ದಾಖಲಾಗುತ್ತಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿಯೂ ಮತ್ತೊಂದು ದೂರು ದಾಖಲಿಸಿಕೊಳ್ಳಲಾಗುತ್ತಿದೆ. ಸದ್ರಿ ಪ್ರಕರಣಗಳು ದಾಖಲಾದ ಬಳಿಕ ಈ ಬಗ್ಗೆ ಸಂಪೂರ್ಣ ಮಾಹಿತಿ  ನೀಡಲಾಗುವುದು ಎಂದಿರುವ ಪೊಲೀಸರು, ಕೃತ್ಯ ನಡೆದ ಅಂಗಡಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು, ಸಿಸಿ ಟಿವಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಯಾವುದೇ ಸುಳ್ಳು ವದಂತಿಗಳನ್ನು ಪ್ರಸಾರ ಮಾಡಿದಲ್ಲಿ ಅವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಅವರು ತಿಳಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಝೆರಾಕ್ಸ್ ಅಂಗಡಿ ಪ್ರಮಾದದಿಂದ ಘರ್ಷಣೆ : ಸೀಸಿ ಟಿವಿ ಫೂಟೇಜ್ ಸಂಗ್ರಹಿಸಿ ಕ್ರಮ, ವದಂತಿ ಹಬ್ಬಿದರೆ ಕಠಿಣ ಕ್ರಮ : ಜಿಲ್ಲಾ ಎಸ್ಪಿ ಎಚ್ಚರಿಕೆ Rating: 5 Reviewed By: lk
Scroll to Top