ಪುತ್ತೂರು, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ದರ್ಬೆಯಲ್ಲಿ ಅಗಸ್ಟ್ 21 ರಂದು ಮಧ್ಯಾಹ್ನ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲ ಪ್ರಕರಣದಲ್ಲಿ ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ಎಂಬವರು ದೂರು ನೀಡಿದ್ದು, ಇವರು ಆಗಸ್ಟ್ 21 ರಂದು ತನ್ನ ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದವರು ಮಧ್ಯಾಹ್ನ ವೇಳೆ, ಕೆಲ ದಾಖಲಾತಿಗಳನ್ನು ಪ್ರಿಂಟ್ ತೆಗೆಸಲು ಹಾಗೂ ಲ್ಯಾಮಿನೇಷನ್ ಮಾಡಿಸಲು, ಪುತ್ತೂರು ದರ್ಬೆ ಎಂಬಲ್ಲಿರುವ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ಕೊಟ್ಟಿರುತ್ತಾರೆ. ಕೆಲ ಹೊತ್ತಿನ ಬಳಿಕ ಸದ್ರಿ ದಾಖಲಾತಿಗಳನ್ನು ವಾಪಾಸ್ಸು ಪಡೆಯಲು ಅವುಗಳ ಪೈಕಿ ಒಂದು ದಾಖಲಾತಿ ಹುಡಿಯಾಗಿದ್ದು, ಈ ಬಗ್ಗೆ ಅಕ್ಷೇಪಿಸಿ ಸದ್ರಿ ದಾಖಲಾತಿಯನ್ನು ಸರಿಪಡಿಸಿ ಕೊಡಿ ಅಥವಾ ಹೊಸ ದಾಖಲಾತಿ ಪಡೆಯಲು 300/- ರೂಪಾಯಿಗಳನ್ನು ನೀಡುವಂತೆ ತಿಳಿಸಿರುತ್ತಾರೆ. ಈ ಬಗ್ಗೆ ಸದ್ರಿ ಅಂಗಡಿಯಲ್ಲಿದ್ದ ಆರೋಪಿಗಳಾದ ಅಂಜನಾ ಪೈ ಹಾಗೂ ಸುದರ್ಶನ ಪೈ ಎಂಬವರು ಅವ್ಯಾಚವಾಗಿ ಬೈದಿರುತ್ತಾರೆ ಹಾಗೂ ಸುದರ್ಶನ ಪೈ ಅವರು ಮಿಸ್ವಾನಾ ಅವರ ತಮ್ಮ ಹಾಗೂ ತಂಗಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವುದಾಗಿದೆ. ಈ ವೇಳೆ ಸ್ಥಳದಲ್ಲಿ ಸೇರಿದ ಜನರು ಗಲಾಟೆ ಬಿಡಿಸಿ, ಮಿಸ್ವಾನಾ ಮತ್ತು ಅವರ ತಂಗಿ, ತಮ್ಮನನ್ನು ಉಪಚರಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಅಪರಾಧ ಕ್ರಮಾಂಕ 97/2026, ಕಲಂ 352, 115(2) 109, ಜೊತೆಗೆ 3(5) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸುದರ್ಶನ ಪೈ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನಿಗೆ ನ್ಯಾಯಾಲಯವು ಸೆಪ್ಟೆಂಬರ್ 2 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನೊಂದು ಪ್ರಕರಣದಲ್ಲಿ ಪುತ್ತೂರು ಕಸಬಾ ನಿವಾಸಿ ಅಂಜನಾ ಎಸ್ ಪೈ (50) ಅವರು ದೂರು ನೀಡಿದ್ದು, ಇವರು ಪುತ್ತೂರಿನ ದರ್ಬೆ ಎಂಬಲ್ಲಿ ಡ್ರೀಮ್ ಡೆಸ್ಟಿನೇಷನ್ ಎಂಬ ಹೆಸರಿನ ಜನಸೇವಾ ಕೇಂದ್ರವನ್ನು ನಡೆಸಿಕೊಂಡು ಬರುತ್ತಿದ್ದು, ಸದ್ರಿ ಕೇಂದ್ರಕ್ಕೆ ಆಗಸ್ಟ್ 21 ರಂದು ಮಧ್ಯಾಹ್ನ ಮಹಿಳೆಯೊಬ್ಬರು ಲ್ಯಾಮಿನೇಶನ್ ಗಾಗಿ ನೀಡಿದ್ದ ದಾಖಲಾತಿಯೊಂದು ತಾಂತ್ರಿಕ ದೋಷದಿಂದ ಹುಡಿಯಾಗಿದ್ದು, ಸದ್ರಿ ದಾಖಲಾತಿಯನ್ನು ನೀಡಿದ್ದ ಮಹಿಳೆ ಗಲಾಟೆ ಮಾಡುತ್ತಿರುವುದಾಗಿ ಸಂಜೆಯ ವೇಳೆ ಅಂಗಡಿಯ ಸಿಬ್ಬಂದಿ ತಿಳಿಸಿದ ಮೇರೆಗೆ, ತಕ್ಷಣ ಅಂಗಡಿಗೆ ಬಂದಿರುತ್ತಾರೆ. ಈ ವೇಳೆ ಅಲ್ಲಿದ್ದ 2 ಜನ ಹೆಂಗಸರು ಹಾಗೂ ಒಬ್ಬ ಗಂಡಸು ಗಲಾಟೆ ನಡೆಸುತ್ತಾ, ದಾಖಲಾತಿಗಳನ್ನು ನೀಡಿ ಅಥವಾ 10 ಸಾವಿರ ರೂಪಾಯಿ ಹಣ ಕೊಡಬೇಕು ಎಂಬುದಾಗಿ ತಿಳಿಸಿದ್ದು, ಈ ವೇಳೆ ಸಮಾದಾನಪಡಿಸಲು ಯತ್ನಿಸಿರುತ್ತಾರೆ. ಅವರುಗಳು ವಿಡಿಯೋ ಮಾಡಲು ಯತ್ನಿಸಿ, ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿದ್ದು, ಮತ್ತೋರ್ವ ಆರೋಪಿ ಜೀವಬೆದರಿಕೆ ಒಡ್ಡಿರುತ್ತಾನೆ. ಈ ಬಗ್ಗೆ ಆರೋಪಿಗಳಾದ ಪಾತಿಮಾತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ಎಂಬವರುಗಳು ವಿರುದ್ದ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2026, ಕಲಂ 115(2) 352, 351(2), 79 ಜೊತೆಗೆ 3(5) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೂರನೇ ಪ್ರಕರಣದಲ್ಲಿ ಆಗಸ್ಟ್ 21 ರಂದು ಸಂಜೆ ವೇಳೆ ಪುತ್ತೂರು ಕಸಬಾ ಗ್ರಾಮದ ದರ್ಬೆ ಜಂಕ್ಷನ್ ಬಳಿ ಡ್ರೀಮ್ ಡೆಸ್ಟಿನೆಶನ್ ಜನಸೇವಾ ಕೇಂದ್ರದ ಎದುರು ಕೆಲವು ಸಾರ್ವಜನಿಕ ವ್ಯಕ್ತಿಗಳು ಸೇರಿ ಗಲಾಟೆ ನಡೆಸುತ್ತಿರುವುದಾಗಿ ಪುತ್ತೂರು ನಗರ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಜಾನ್ಸನ್ ಡಿಸೋಜಾ ಅವರಿಗೆ ಮಾಹಿತಿ ಬಂದ ಮೇರೆಗೆ, ಠಾಣಾ ಆಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು ಸ್ಥಳದಲ್ಲಿ ಜನರು ಸೇರಿರುವುದು ಕಂಡುಬಂದಿರುತ್ತದೆ. ಪೊಲೀಸರು ಸೇರಿದ್ದ ಜನರನ್ನು ಚದುರಿಸುತ್ತಿದ್ದಾಗ ಕೆಲವರು ಪೆÇಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಗಲಾಟೆಗೆ ಸಂಬಂಧಿಸಿದಂತೆ ಕೆಲವರನ್ನು ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾಗ ನಿಯಾಝ್, ನೌಶಾದ್ ಹಾಗೂ ಇತರರು ತಡೆಯೊಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2026, ಕಲಂ 132, 121(1), ಜೊತೆಗೆ 3(5) ಬಿ ಎನ್ ಎಸ್-2023 ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಅಪರಾಧ ಕ್ರಮಾಂಕ 97/2026 ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಪುತ್ತೂರು ಕಸಬಾ ನಿವಾಸಿ ಆರೋಪಿ ಸುದರ್ಶನ ಪೈ ಪಿ (29) ಎಂಬಾತನ ವಿರುದ್ದ ಈ ಹಿಂದೆ ಕಂಕನಾಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 182/2025, ಕಲಂ 8 (ಸಿ) ಎನ್ ಡಿ ಪಿ ಎಸ್ ಆಕ್ಟ್ ಪ್ರಕರಾರ ಪ್ರಕರಣ ದಾಖಲಾಗಿದೆ ಹಾಗೂ ರಾಮನಗರ ಜಿಲ್ಲೆಯ ಕುದೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2021, ಕಲಂ 307, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ವೇಳೆ ಆರೋಪಿ ಸುದರ್ಶನ ಪೈ ಅವರ ತಂದೆ ಸದಾಶಿವ ಪೈ ಅವರು ಸ್ಥಳದಲ್ಲಿ ಇಲ್ಲದೆ ಇದ್ದು, ಗಲಾಟೆ ನಡೆದ ಬಳಿಕ ಸ್ಥಳಕ್ಕೆ ಬಂದು ಗಲಾಟೆ ಬಿಡಿಸಲು ಪ್ರಯತ್ನಿಸಿರುತ್ತಾರೆ.
ಘಟನೆ ನಡೆದಾಗ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದು, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸದ್ರಿ ಜನರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದರೂ ತೆರಳದಿದ್ದಾಗ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ.
ಪುತ್ತೂರು ಚಿಕ್ಕಮುಡ್ನೂರು ನಿವಾಸಿ ಮಹಮ್ಮದ್ ನೌಶಾದ್ (30) ಎಂಬಾತನ ವಿರುದ್ಧ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2024, ಕಲಂ 126(2), 352, 115(2), 351(2), 3(5) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿರುತ್ತದೆ ಹಾಗೂ ಆಗಸ್ಟ್ 21 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈತನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಇವುಗಳನ್ನು ಹೊರತುಪಡಿಸಿದಂತೆ ಬೇರೆ ಪ್ರಕರಣಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ನೌಶಾದ್ ಎಂಬಾತನನ್ನು ಪ್ರಸ್ತುತ ದಸ್ತಗಿರಿ ಮಾಡಲಾಗಿರುವುದಿಲ್ಲ. ಘಟನೆಗೆ ಸಂಬಂಧಿಸಿದ ವಿಡಿಯೋಗಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಜಿಲ್ಲಾ ಎಸ್ಪಿ ಸ್ಪಷ್ಟಪಡಿಸಿದ್ದಾರೆ.











0 comments:
Post a Comment