ಮಂಗಳೂರು, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಏಳು ಜನ ಗ್ರೂಪ್ ಡಿ ನೌಕರರನ್ನು ಸನ್ಮಾನಿಸಲಾಯಿತು.
ಮೂರು ಜನ ಹೌಸ್ ಕೀಪಿಂಗ್ ಸಿಬ್ಬಂದಿಗಳು ಕೆಎಂಸಿ ಮಂಗಳೂರು ವತಿಯಿಂದ ಹಾಗೂ 4 ಜನ ಗ್ರೂಪ್ ಡಿ ವೆನ್ಲಾಕ್ ಆಸ್ಪತ್ರೆಯಿಂದ ಒಟ್ಟು ಏಳು ಜನರಿಗೆ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸಂಭ್ರಮಾಚರಣೆ ದಿನ ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ ಎಸ್, ಆರ್ ಎಂ ಒ ಡಾ ಮಧುಸೂದನ್, ಎಡಿಪಿ ರವೀಂದ್ರ, ಎಎಒ ಪುಟ್ಟರಾಜು, ಶುಶ್ರೂಷಕ ಅಧೀಕ್ಷಕರು ಕುಮುದ, ಎ ಆರ್ ಎಸ್ ಸದಸ್ಯರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.





















0 comments:
Post a Comment