ಬಂಟ್ವಾಳ, ಆಗಸ್ಟ್ 26, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರಿನ ಪ್ರತಿಷ್ಠಿತ ಆಹಾರ ಸಂಸ್ಥೆ “ಎಲಾಟೋ ಗ್ರೂಪ್” ಸಂಸ್ಥಾಪಕ ಅಬ್ದುಲ್ ಹಕೀಂ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಗ್ಲೋಬಲ್ ಐಕಾನ್ ಪ್ರಶಸ್ತಿ ಅರಸಿ ಬಂದಿದೆ.
ಐಸ್ ಕ್ರೀಂ ಉದ್ಯಮದಲ್ಲಿ ಸುದೀರ್ಘ 35 ವರ್ಷಗಳ ಅನುಭವ ಹೊಂದಿರುವ ಅಬ್ದುಲ್ ಹಕೀಂ ಅವರು ಇತ್ತೀಚೆಗಷ್ಟೆ ಎಲಾಟೋ ಸೆಲೆಬ್ರೆ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿದ್ದರು.
ಹೊಸದಿಲ್ಲಿಯ ಹೊಟೇಲ್ ಸಯಾ ಟಿಕ್ ಸೆಂಟ್ರಿಕ್ ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿದ್ದಾರೆ.
ಹಕೀಂ ಅವರಿಗೆ ಗ್ಲೋಬಲ್ ಐಕಾಸ್ ಅವಾರ್ಡ್ ದೊರೆತಿರುವುದು ಅವರ ಉದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಪಾಣೆಮಂಗಳೂರಿನ ಉಲ್ಲಾಸ್ ಐಸ್ ಕ್ರೀಂ ಸಂಸ್ಥೆಯಲ್ಲಿ ಸುದೀರ್ಘ ಅನುಭವ ಪಡೆದಿದ್ದ ಅಬ್ದುಲ್ ಹಕೀಂ ಇದೀಗ ಉಲ್ಲಾಸ್ ಸಂಸ್ಥೆಯ ಜೊತೆಗಿನ ನಂಟು ಇಟ್ಟುಕೊಂಡೇ ತಮ್ಮದೇ ಸ್ವ ಉದ್ಯಮ ಆರಂಭಿಸಿ ಆರಂಭಿಕ ಯಶಸ್ಸು ಕಂಡಿದ್ದಾರೆ.
ಪ್ರೀಮಿಯಂ ಗುಣಮಟ್ಟದ ಐಸ್ ಕ್ರೀಂ ಉತ್ಪಾದನಾ ಬ್ರಾಂಡ್ ಗಾಗಿ ಎಲಾಟೊ ಸಂಸ್ಥೆ ಈ ಗ್ಲೋಬಲ್ ಐಕಾನ್ ಎವಾರ್ಡ್ ಪಡೆದುಕೊಂಡು ಮೈಲಿಗಲ್ಲು ಸ್ಥಾಪಿಸಿದೆ.
ಅಬ್ದುಲ್ ಹಕೀಂ ಅವರು “ELATO Where Every Celebration Begin” ಎಂಬ ಧ್ಯೇಯ ವಾಕ್ಯದೊಂದಿಗೆ ಗುಣಮಟ್ಟ, ನವೀನತೆ, ಸಂಸ್ಕೃತಿಯುತ ಅನುಭವ ಮತ್ತು ಆತ್ಮೀಯ ಆತಿಥ್ಯವನ್ನು ಕೇಂದ್ರವಾಗಿಟ್ಟುಕೊಂಡು ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಉಲ್ಲಾಸ್ ಐಸ್ ಕ್ರೀಂ ಸಂಸ್ಥೆಯ ಸಂಸ್ಥಾಪಕ ದಿವಂಗತ ಗಣಪತಿ ಪೈ ಅವರೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಅಬ್ದುಲ್ ಹಕೀಂ ಅವರು ಐಸ್ ಕ್ರೀಂ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಗಳಿಸಿದರು. ಉತ್ಪನ್ನದ ಗುಣಮಟ್ಟ, ಮಾರ್ಕೆಟಿಂಗ್, ವಿತರಣೆ, ಗ್ರಾಹಕರೊಂದಿಗಿನ ಸಂಬಂಧ ಹಾಗೂ ವ್ಯವಹಾರ ನಿರ್ವಹಣೆ ಸೇರಿದಂತೆ ಉದ್ಯಮದ ವಿವಿಧ ಆಯಾಮಗಳಲ್ಲಿ ಅವರು ಪರಿಣತಿ ಪಡೆದರು. ಇದೇ ಅವಧಿಯಲ್ಲಿ ಅವರು ಉಲ್ಲಾಸ್ ಮಾರ್ಕೆಟಿಂಗ್ ಎಂಬ ಮಾರ್ಕೆಟಿಂಗ್ ಮತ್ತು ವಿತರಣಾ ಸಂಸ್ಥೆಯನ್ನು ಸ್ಥಾಪಿಸಿ, ಉಲ್ಲಾಸ್ ಐಸ್ ಕ್ರೀಂ ಸಂಸ್ಥೆಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಸ್ತುತ ಉದಯ ಪೈ ಅವರ ನೇತೃತ್ವದಲ್ಲಿರುವ ಉಲ್ಲಾಸ್ ಐಸ್ ಕ್ರೀಂನೊಂದಿಗಿನ ತಮ್ಮ ವೃತ್ತಿಪರ ಸಂಬಂಧವನ್ನು ಅವರು ಮುಂದುವರಿಸಿಕೊಂಡು ಬಂದಿರುವುದರೊಂದಿಗೆ ಎಲಾಟೋ ಗ್ರೂಪ್ ಸಂಸ್ಥೆಯನ್ನೂ ಮುನ್ನಡೆಸುತ್ತಿದ್ದಾರೆ. ಈ ಎರಡೂ ಜವಾಬ್ದಾರಿಗಳನ್ನು ಸಮತೋಲನದಿಂದ ನಿರ್ವಹಿಸುತ್ತಿರುವುದು ಉದ್ಯಮದ ಮೇಲಿನ ಅವರ ನಿರಂತರ ಬದ್ಧತೆ ಹಾಗೂ 3 ದಶಕಗಳ ಕಾಲ ಬೆಳೆಸಿಕೊಂಡು ಬಂದ ವೃತ್ತಿಪರ ಸಂಬಂಧಗಳಿಗೆ ಅವರು ನೀಡುವ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ಪತ್ನಿ ಹಾಗೂ ಮಕ್ಕಳ ಸಹಕಾರದೊಂದಿಗೆ ಅವರು ಬಹುಕಾಲದ ಕನಸನ್ನು ಎಲಾಟೋ ಗ್ರೂಪ್ ರೂಪದಲ್ಲಿ ಸಾಕಾರಗೊಳಿಸಿದ್ದಾರೆ. ಕುಟುಂಬ ಮೌಲ್ಯಗಳು ಮತ್ತು ಉದ್ಯಮಶೀಲತೆಯ ದೃಢಸಂಕಲ್ಪದ ಮೇಲೆ ನಿರ್ಮಾಣಗೊಂಡ ಈ ಸಂಸ್ಥೆ ಕೇವಲ ಸಾಮಾನ್ಯ ಕೆಫೆ ಅಥವಾ ಐಸ್ ಕ್ರೀಂ ಪಾರ್ಲರ್ ಆಗಿರದೆ, ಕೈಯಾರೆ ತಯಾರಿಸಲಾದ ಐಸ್ ಕ್ರೀಂ, ವಿಶೇಷ ಡೆಸರ್ಟ್‍ಗಳು, ಸ್ಪೆಷಾಲಿಟಿ ಕಾಫಿ, ಕೆಫೆ ಆಹಾರ ಹಾಗೂ ಸೊಗಸಾದ ವಾತಾವರಣವನ್ನು ಒದಗಿಸುವ ಪ್ರೀಮಿಯಂ ಹಾಸ್ಪಿಟಾಲಿಟಿ ತಾಣವಾಗಿ ಬೆಳೆದು ಬಂದಿದೆ.
ಎಲಾಟೋ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಅಂದಿನ ಸ್ಪೀಕರ್ ಆಗಿದ್ದ ಡಾ ಯು ಟಿ ಖಾದರ್, ಖಾದರ್, ಉಲ್ಲಾಸ್ ಸಂಸ್ಥೆಯ ಮಾಲಕ ಉದಯ ಪೈ, ಹಕೀಂ ಅವರ ಕುಟುಂಬ ಸದಸ್ಯರು, ಹಿತೈಷಿಗಳು ಹಾಗೂ ಹಲವಾರು ಗಣ್ಯರು ಭಾಗವಹಿಸಿದ್ದರು.
ಎಲಾಟೋ ಸಂಸ್ಥೆಯು ತನ್ನ ಸೇವಾ ವಲಯವನ್ನು ವಿಸ್ತರಿಸಿ ಎಲಾಟೋ ಇವೇಂಟ್ಸ್ ಆಂಡ್ ಸ್ಟೇ ಅನ್ನು ಆರಂಭಿಸಿ ಮದುವೆ, ನಿಶ್ಚಿತಾರ್ಥ, ಕುಟುಂಬ ಸಮಾರಂಭಗಳು, ಕಾರ್ಯಕ್ರಮಗಳು ಹಾಗೂ ಖಾಸಗಿ ಸಮಾರಂಭಗಳಿಗೆ ಅಗತ್ಯವಿರುವ ಸ್ಥಳ ಮತ್ತು ವಸತಿ ಸೌಲಭ್ಯಗಳನ್ನು ಇದು ಒದಗಿಸುತ್ತದೆ. ಈ ವಿಸ್ತರಣೆಯ ಮೂಲಕ ಆಹಾರ, ಸಂಭ್ರಮಾಚರಣೆ ಮತ್ತು ಆತಿಥ್ಯ ಈ ಮೂರನ್ನೂ ಒಂದೇ ತಾಣದಲ್ಲಿ ಒಗ್ಗೂಡಿಸುವ ಸಮಗ್ರ ಹಾಸ್ಪಿಟಾಲಿಟಿ ಡೆಸ್ಟಿನೇಷನ್ ಆಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.
ಆಧುನಿಕ ಬ್ರ್ಯಾಂಡಿಂಗ್ ಮಹತ್ವವನ್ನು ಅರಿತುಕೊಂಡಿರುವ ಅಬ್ದುಲ್ ಹಕೀಂ ಅವರು ಎಲಾಟೋ ಸಂಸ್ಥೆಯ ಡಿಜಿಟಲ್ ಉಪಸ್ಥಿತಿಗೂ ವಿಶೇಷ ಪೆÇ್ರೀತ್ಸಾಹ ನೀಡಿದ್ದಾರೆ. ದೃಶ್ಯ ಕಥನ, ಸೃಜನಾತ್ಮಕ ಸಂವಹನ ಮತ್ತು ಗ್ರಾಹಕರೊಂದಿಗೆ ನಿರಂತರ ಸಂಪರ್ಕದ ಮೂಲಕ ಆಧುನಿಕ ಪೀಳಿಗೆಯ ಗ್ರಾಹಕರನ್ನು ತಲುಪುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಎಲಾಟೋ ತನ್ನ ಪ್ರೀಮಿಯಂ ಗುರುತನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಎಲಾಟೋ ಕುಟುಂಬ ಆಧಾರಿತ ಸಂಸ್ಥೆಯಾಗಿ ಆರಂಭಿಸಲಾಗಿದ್ದು, ಶ್ರೀಮತಿ ಸುರಯ್ಯ ಫರ್ವೀನ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಮಾರಿ ಮರಿಯಂ ಶುಹಾ ಅವರು ಬ್ರ್ಯಾಂಡ್ ಮತ್ತು ಸೃಜನಾತ್ಮಕ ಸಮನ್ವಯದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದು, ಮಾಸ್ಟರ್ ಮೊಹಮ್ಮದ್ ಶುಐಮ್ ಅವರು ಬ್ರ್ಯಾಂಡ್ ಅಭಿವೃದ್ಧಿ ಹಾಗೂ ಡಿಜಿಟಲ್ ಮಾಧ್ಯಮ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ. ಕುಟುಂಬದ ಕಿರಿಯ ಸದಸ್ಯ ಮಾಸ್ಟರ್ ಮೊಹಮ್ಮದ್ ಶುಐಝ್ ಅವರು ಕುಟುಂಬದ ಮುಂದಿನ ಪೀಳಿಗೆಯ ಕನಸುಗಳು ಮತ್ತು ಆಶಯಗಳ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಲ್ಲಾಸ್ ಸಂಸ್ಥೆಯ ಉದಯ ಪೈ ಅವರ ವಿಶ್ವಾಸ ಮತ್ತು ಮಾರ್ಗದರ್ಶನವನ್ನು ಕೃತಜ್ಞತೆಯಿಂದ ಸ್ಮರಿಸುವ ಹಕೀಂ ಅವರು ಜೊತೆಗೆ ಉಲ್ಲಾಸ್ ಮಾರ್ಕೆಟಿಂಗ್ ವ್ಯವಸ್ಥಾಪಕ ಮುಖ್ಯಸ್ಥ ಶಮೀರ್, ಉಲ್ಲಾಸ್ ವ್ಯವಸ್ಥಾಪಕ ಮುಖ್ಯಸ್ಥ ವೆಂಕಟ್ರಮಣ ಭಟ್ ಹಾಗೂ ಉಲ್ಲಾಸ್ ಸಂಸ್ಥೆಯ ಸಮಗ್ರ ತಂಡಗಳ ಬೆಂಬಲವನ್ನೂ ಅವರು ಗೌರವದಿಂದ ಸ್ಮರಿಸುತ್ತಾರೆ.




















0 comments:
Post a Comment