ಮನೆಯೊಳಗೆ ಪೆಟ್ಟಿಗೆಯಲ್ಲಿಟ್ಟಿದ್ದ ನಗದು ಹಣ ಕಳವು : ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - Karavali Times ಮನೆಯೊಳಗೆ ಪೆಟ್ಟಿಗೆಯಲ್ಲಿಟ್ಟಿದ್ದ ನಗದು ಹಣ ಕಳವು : ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - Karavali Times

728x90

28 August 2026

ಮನೆಯೊಳಗೆ ಪೆಟ್ಟಿಗೆಯಲ್ಲಿಟ್ಟಿದ್ದ ನಗದು ಹಣ ಕಳವು : ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕಡಬ, ಆಗಸ್ಟ್ 28, 2026 (ಕರಾವಳಿ ಟೈಮ್ಸ್) : ಮನೆ ಮಂದಿ ಹೊರಗಡೆ ತೆರಳಿದ್ದ ವೇಳೆ ಮನೆಗೆ ಪ್ರವೇಶಿಸಿದ ಕಳ್ಳರು ನಗದು ಹಣ ಕಳವುಗೈದ ಘಟನೆ ಆಗಸ್ಟ್ 24 ರಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಡಬ ನಿವಾಸಿ ತಮನ್ನಾ ಜಬೀನ್ (43) ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ತನ್ನ ಗಂಡನ ಮನೆಯಾದ ಕಡಬ ಅಡ್ಡಗದ್ದೆ ಎಂಬಲ್ಲಿ ಗಂಡ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದಾರೆ. ಇವರು ತನ್ನ ರೂಮಿನಲ್ಲಿಟ್ಟಿದ್ದ ಮರದ ಬಾಕ್ಸಿನಲ್ಲಿ ಹಣ ಸಂಗ್ರಹ ಮಾಡಿಕೊಂಡಿದ್ದರು. ಆಗಸ್ಟ್ 18 ರಂದು ಇವರು ಕಾರ್ಯಕ್ರಮವೊಂದರ ನಿಮಿತ್ತ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿದ್ದವರು ಅದೇ ದಿನ ಮನೆಗೆ  ಹಿಂತಿರುಗಿರುತ್ತಾರೆ. ಆಗಸ್ಟ್ 24 ರಂದು ತಾನು ಮರದ ಬಾಕ್ಸಿನಲ್ಲಿಟ್ಟಿದ್ದ ಹಣವನ್ನು ತೆಗೆಯಲು ಹೋದಾಗ, ಸದ್ರಿ ಮರದ ಬಾಕ್ಸ್  ಒಡೆದ ರೀತಿಯಲ್ಲಿದ್ದು, ಪರಿಶೀಲಿಸಿದಾಗ ಸದ್ರಿ ಬಾಕ್ಸಿನಲ್ಲಿಟ್ಟಿದ್ದ 84,800/- ರೂಪಾಯಿ ನಗದು ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮನೆಯೊಳಗೆ ಪೆಟ್ಟಿಗೆಯಲ್ಲಿಟ್ಟಿದ್ದ ನಗದು ಹಣ ಕಳವು : ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು Rating: 5 Reviewed By: karavali Times
Scroll to Top