ಧರ್ಮಸ್ಥಳ, ಆಗಸ್ಟ್ 28, 2026 (ಕರಾವಳಿ ಟೈಮ್ಸ್) : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯೋರ್ವಳನ್ನು ಆರೋಪಿ ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್ (21) ಎಂಬಾತ 2025ನೇ ಇಸವಿ ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಬಲವಂತವಾಗಿ ಅತ್ಯಾಚಾರ ಮಾಡಿ, ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದು, ಸದ್ರಿ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುತ್ತಾಳೆ. ಈ ಬಗ್ಗೆ 2026 ಆಗಸ್ಟ್ 23 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2026 ಕಲಂ 64(2)(ಎಂ), 65(1), 351(2) ಬಿ ಎನ್ ಎಸ್ ಕಲಂ 4(2), 6 ಪೊಕ್ಸೋ ಪ್ರಕರಣದ ದಾಖಲಿಸಿಕೊಂಡು ತನಿಖೆ ಪ್ರಗತಿಯಲ್ಲಿರುತ್ತದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ ಆರೋಪಿ ಶ್ರೀಕಾಂತನನ್ನು ಧರ್ಮಸ್ಥಳ ಠಾಣಾ ಪಿಎಸ್ಸೈ ಸಮರ್ಥ್ ಆರ್ ಗಾಣಿಗೇರ, ಧರ್ಮಸ್ಥಳ ಠಾಣಾ ಸಿಬ್ಬಂದಿಗಳಾದ ವೃಷಭ, ಮಹೇಶ್, ಚರಣ್ ರಾಜ್ ಅವರುಗಳ ತಂಡ ಆಗಸ್ಟ್ 25 ರಂದು ಬೆಂಗಳೂರಿನ ದೊಡ್ಡಬಳ್ಳಾಪುರ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





















0 comments:
Post a Comment