ಮಂಚಿ ಸೈಟ್ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times ಮಂಚಿ ಸೈಟ್ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times

728x90

15 August 2026

ಮಂಚಿ ಸೈಟ್ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಮಂಚಿ ಹಾಗೂ ಕಾಡಂಗಡಿ ಶ್ರೀ ಶಕ್ತಿ ಸಂಘ, ಅಂಗನವಾಡಿ ಕೇಂದ್ರ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ದೇಶದ 80ನೇ ಸ್ವಾತಂತ್ರ್ಯೋತ್ಸವ ಮಂಚಿ ಗ್ರಾಮದ ಮಂಚಿ ಸೈಟ್ ಅಂಗನವಾಡಿ ಕೇಂದ್ರದಲ್ಲಿ  ಆಚರಿಸಲಾಯಿತು. 

ಲಕ್ಷ್ಮಿ ನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಭಟ್ ಕೈಯೂರು ಧ್ವಜಾರೋಹಣಗೈದರು. ಮಂಚಿ ಗ್ರಾ ಪಂ ನಿಕಟಪೂರ್ವ ಸದಸ್ಯ ಬದ್ರುದ್ದೀನ್ ಕೈಯೂರು ಅಧ್ಯಕ್ಷತೆ ವಹಿಸಿದ್ದರು. 

ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷೆ ಬಿ ಗೀತಾ, ಸದಸ್ಯರುಗಳಾದ ಶೋಭಾ, ಜಯಂತಿ, ಬಂಟ್ವಾಳ ಎಸ್ ವಿ ಎಸ್ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ,  ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಫೌಝಿಯಾ, ಪ್ರಮುಖರಾದ ಇಲ್ಯಾಸ್ ಶಾಫಿ, ಅಹ್ಮದ್ ಡಿ, ಹೈದರಾಲಿ ಎಂ ಎಚ್, ವಿಶ್ವನಾಥ ನಾಯ್ಕ, ಪುರುಷೋತ್ತಮ ಸ್ಥಾನಮೂಲ, ಹಂಝ ಮಂಚಿ ಸೈಟ್, ಗುರುವಪ್ಪ ನಾಯ್ಕ, ಆಶಾ ಕಾರ್ಯಕರ್ತೆ ಯಮುನಾ ಮೊದಲಾದವರು ಭಾಗವಹಿಸಿದ್ದರು. 

ಮಂಚಿ ಸೈಟ್ ಅಂಗನವಾಡಿ ಕಾರ್ಯಕರ್ತೆ ಪ್ರೇಮ ಟೀಚರ್ ಸ್ವಾಗತಿಸಿ, ಕಾಡಂಗಡಿ ಅಂಗನವಾಡಿ ಕಾರ್ಯಕರ್ತೆ ಶರ್ಮಿಳಾ ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಚಿ ಸೈಟ್ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top