ನಲ್ಕೆಮಾರ್ : ನಿವೃತ್ತ ಯೋಧ ಹಾಗೂ ಪ್ರಗತಿ ಕೃಷಿಕರಿಗೆ ಸನ್ಮಾನ - Karavali Times ನಲ್ಕೆಮಾರ್ : ನಿವೃತ್ತ ಯೋಧ ಹಾಗೂ ಪ್ರಗತಿ ಕೃಷಿಕರಿಗೆ ಸನ್ಮಾನ - Karavali Times

728x90

15 August 2026

ನಲ್ಕೆಮಾರ್ : ನಿವೃತ್ತ ಯೋಧ ಹಾಗೂ ಪ್ರಗತಿ ಕೃಷಿಕರಿಗೆ ಸನ್ಮಾನ

ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯೋತ್ಸವ ಸಂಭ್ರಮದ ಪ್ರಯುಕ್ತ ಬಂಟ್ವಾಳ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ವತಿಯಿಂದ ಮೊಡಂಕಾಪು ಸಮೀಪದ ನಲ್ಕೆಮಾರ್ ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ನಿವೃತ್ತ ಸೈನಿಕ ಡಿಕೇಶ್ ಮತ್ತು ಪ್ರಗತಿಪರ ಕೃಷಿಕ ಮಾರ್ಕ್ ಬರೆಟ್ಟೋ ಅಮ್ಟಾಡಿ ಅವರನ್ನು ಸನ್ಮಾನಿಸಲಾಯಿತು. 

ಸನ್ಮಾನ ನೆರವೇರಿಸಿದ ಘಟಕದ ಲೀಜನ್ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಮಾತನಾಡಿ, ಕೃಷಿಕರು ಮತ್ತು ಸೈನಿಕರು ದೇಶದ ಬೆನ್ನೆಲುಬು. ಅವರ ಸೇವೆಗೆ  ಸಮಾಜ ಋಣಿಯಾಗಿದ್ದು ಅವರನ್ನು ಗೌರವಿಸುವುದು ಕರ್ತವ್ಯ ಎಂದರು. 

ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ, ಘಟಕದ ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ, ಮಾಜಿ ಉಪಾಧ್ಯಕ್ಷ ಸತ್ಯನಾರಾಯಣ ರಾವ್, ಉಪಾಧ್ಯಕ್ಷ  ಜಯ್ ಗಣೇಶ್, ಕೋಶಾಧಿಕಾರಿ ಪಿ ಮಹಮ್ಮದ್ ಮೊದಲಾದವರು ಭಾಗವಹಿಸಿದ್ದರು. 

ಕಾರ್ಯದರ್ಶಿ ರೇಖಾ ರಾವ್, ಜೊತೆ ಕಾರ್ಯದರ್ಶಿ ಸನ್ಮತಿ ಜೈನ್ ಅಭಿನಂದನಾ ಭಾಷಣ ಮಾಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.

  • Blogger Comments
  • Facebook Comments

0 comments:

Post a Comment

Item Reviewed: ನಲ್ಕೆಮಾರ್ : ನಿವೃತ್ತ ಯೋಧ ಹಾಗೂ ಪ್ರಗತಿ ಕೃಷಿಕರಿಗೆ ಸನ್ಮಾನ Rating: 5 Reviewed By: karavali Times
Scroll to Top