ರಾಯಿ : ತೋಡಿಗೆ ಬಿದ್ದು ಕಾಣೆಯಾಗಿದ್ದ ಜೀವನ್ ಪಿಂಟೋ ಮೃತದೇಹ ಪತ್ತೆ - Karavali Times ರಾಯಿ : ತೋಡಿಗೆ ಬಿದ್ದು ಕಾಣೆಯಾಗಿದ್ದ ಜೀವನ್ ಪಿಂಟೋ ಮೃತದೇಹ ಪತ್ತೆ - Karavali Times

728x90

3 August 2026

ರಾಯಿ : ತೋಡಿಗೆ ಬಿದ್ದು ಕಾಣೆಯಾಗಿದ್ದ ಜೀವನ್ ಪಿಂಟೋ ಮೃತದೇಹ ಪತ್ತೆ

ಬಂಟ್ವಾಳ, ಆಗಸ್ಟ್ 03, 2026 (ಕರಾವಳಿ ಟೈಮ್ಸ್) : ರಾಯಿ ಗ್ರಾಮದ ಕೊಯಿಲ ಸಮೀಪದ ಹೋರಂಗಳ ಬಳಿ ಆಗಸ್ಟ್ 1 ರಂದು ಶನಿವಾರ ರಾತ್ರಿ ಆಕಸ್ಮಿಕ ಕಾಲು ಜಾರಿ ತೋಡಿಗೆ ಬಿದ್ದು ನಾಪತ್ತೆಯಾಗಿದ್ದ ಜೀವನ್ ಪಿಂಟೋ ಮೃತ ದೇಹ ಆಗಸ್ಟ್ 3 ರಂದು ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪದ ನೀರಿನಲ್ಲಿ ಪತ್ತೆಯಾಗಿದೆ ಎಂದು ಎನ್ ಡಿ ಆರ್ ಎಫ್ ತಂಡ ತಿಳಿಸಿದೆ.

ತಾಲೂಕಿನ ರಾಯಿ ಗ್ರಾಮದ ಹೊರಂಗಳ ಎಂಬಲ್ಲಿ ಜೀವನ್ ಪಿಂಟೋ ಬಿನ್ ಜೋಸೆಫ್ ಪಿಂಟೋ (43) ಎಂಬವರು ಆಗಸ್ಟ್ 1 ರಂದು ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದು, ಸದ್ರಿಯವರ ಚಪ್ಪಲಿ ಹಾಗೂ ಟಾರ್ಚ್ ಸದ್ರಿಯವರ ಮನೆಯ ತೊರೆಯ ಬಳಿ ಪತ್ತೆಯಾಗಿತ್ತು. ಇದರಿಂದ ಜೀವನ್ ಅವರು ನೀರಿಗೆ ಬಿದ್ದು ಕಾಣೆಯಾಗಿರುವ ಬಗ್ಗೆ ಶಂಕಿಸಿ ಪೆÇಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಎನ್ ಡಿ ಆರ್ ಎಫ್ ತಂಡದವರು ಭಾನುವಾರ ಸಂಜೆವರೆಗೂ ಹುಡುಕಾಟ ನಡೆಸಿದ್ದು ಪತ್ತೆಯಾಗಿರಲಿಲ್ಲ. ಭಾನುವಾರ ಸಂಜೆ ಕತ್ತಲಾದ ಬಳಿಕ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ಮೃತದೇಹ ಪತ್ತೆಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಯಿ : ತೋಡಿಗೆ ಬಿದ್ದು ಕಾಣೆಯಾಗಿದ್ದ ಜೀವನ್ ಪಿಂಟೋ ಮೃತದೇಹ ಪತ್ತೆ Rating: 5 Reviewed By: karavali Times
Scroll to Top