ಬಂಟ್ವಾಳ, ಆಗಸ್ಟ್ 03, 2026 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಬಿರುಸು ಮುಂದುವರೆದಿದೆ. ಸಂಗಬೆಟ್ಟು ಗ್ರಾಮದ ಮುಗೇರು ನಿವಾಸಿ ರವೀಂದ್ರ ನಾಯಕ್ ಬಿನ್ ಗೋವಿಂದ ನಾಯಕ್ ಅವರ ತೋಟಕ್ಕೆ ಫಲ್ಗುಣಿ ನದಿ ನೀರು ಹರಿದು ಬಂದಿರುತ್ತಿದೆ.
ಬಿ ಮೂಡ ಗ್ರಾಮದ ಪೆಲತ್ತಿಮಾರು ಅರ್ಕಮೆ ಎಂಬಲ್ಲಿ ವಿದ್ಯುತ್ ತಂತಿ ಮತ್ತು ಬುಡ ಸಮೇತ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಕುಂಞÂಮೋನು ಅವರ ಮನೆಗೆ ಮರದ ರೆಂಬೆಗಳು ಬಿದ್ದು ಶೀಟ್ ಹಾನಿಯಾಗಿದೆ.














0 comments:
Post a Comment