ಬಂಟ್ವಾಳ, ಆಗಸ್ಟ್ 14, 2026 (ಕರಾವಳಿ ಟೈಮ್ಸ್) : ಬಹಾದ್ದೂರ್ ಗ್ರೂಪ್ ಆಫ್ ಕಂಪೆನಿ ಹಾಗೂ ಬಹಾದ್ದೂರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದ ಅಲ್-ಬಿರ್ರ್ ಶಾಲೆಗೆ ಟಾಟಾ ಮ್ಯಾಜಿಕ್ ಮಿನಿ ವ್ಯಾನ್ ಹಾಗೂ ಸಾರ್ವಜನಿಕ ಸೇವೆಗಾಗಿ ಅಂಬುಲೆನ್ಸ್ ಕೊಡುಗೆಯಾಗಿ ಆಗಸ್ಟ್ 14 ರಂದು ಹಸ್ತಾಂತರಿಸಲಾಯಿತು.
ವಾಹನಗಳನ್ನು ಜನತೆಗೆ ಅರ್ಪಿಸಿದ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಸಯ್ಯಿದ್ ಅಲಿ ಮನ್ನಾನಿ ಮಾತನಾಡಿ, ದಾನ ಧರ್ಮವು ಮಾನವನ ಎಲ್ಲಾ ಸಂಕಷ್ಟಗಳಿಗೆ ಪರಿಹಾರವಾಗಿದ್ದು, ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಮಾಡುವುದರ ಮೂಲಕ ಜೀವನ ಧನ್ಯಗೊಳಿಸಲು ಕರೆ ನೀಡಿದರು.
ಬಹಾದ್ದೂರ್ ಚಾರಿಟೇಬಲ್ ಟ್ರಸ್ಟಿ ಶರ್ಫುದ್ದೀನ್ ಅವರು ಕಲ್ಲಡ್ಕ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕೋಡಿ ಅವರಿಗೆ ವಾಹನಗಳ ಕೀಲಿ ಕೈ ಹಸ್ತಾಂತರಿಸಿದರು. ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪನಾಮಾ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಅಲ್ ಬಿರ್ರ್ ಶಾಲೆಯನ್ನು ಪ್ರಾರಂಭಿಸಲಾಗಿದ್ದು ಶಾಲಾ ವಾಹನದ ಅತೀ ಅಗತ್ಯತೆಯ ಬಗ್ಗೆ ಝೈನುಲ್ ಆಬಿದ್ ಅವರನ್ನು ಸಂಪರ್ಕಿಸಲಾಗಿತ್ತು. ಬೇಡಿಕೆಗೆ ತಕ್ಷಣ ಸ್ಪಂದಿಸುವುದರ ಜೊತೆಗೆ ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ ಕಲ್ಲಡ್ಕದ ಎಲ್ಲಾ ನಾಗರಿಕರ ತುರ್ತು ಚಿಕಿತ್ಸೆಯ ಅಗತ್ಯ ಸೇವೆಗಾಗಿ ಅಂಬುಲೆನ್ಸ್ ವಾಹನ ಕೂಡಾ ಕೊಡುಗೆಯಾಗಿ ನೀಡುವ ಮೂಲಕ ಸ್ಪಂದನಾ ಮನೋಭಾವ ತೋರಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭ ಮಸೀದಿ ಪದಾಧಿಕಾರಿಗಳಾದ ಅಬೂಬಕ್ಕರ್ ಮುರಬೈಲ್, ಜವಾಝ್, ಸಾದಿಕ್, ಫವಾಝ್ ಸನ್ ಲೈಟ್, ಅಲ್-ಬಿರ್ರ್ ಶಾಲಾ ಕೋ-ಆರ್ಡಿನೇಟರ್ ಝಕರಿಯಾ ಗೋಳ್ತಮಜಲು, ಬಹಾದ್ದೂರ್ ಚಾರಿಟೇಬಲ್ ಟ್ರಸ್ಟ್ ಪ್ರಮುಖರಾದ ಅಬ್ದುಲ್ ಅಝೀಝ್ ಮದನಿ, ಉಮ್ಮರಬ್ಬ ಇರಾ, ಖಲೀಲ್ ಬಹಾದ್ದೂರ್, ಕಬೀರ್ ಬಹಾದ್ದೂರ್ ಹಾಗೂ ಶಾಫಿ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

























0 comments:
Post a Comment