ಸಜಿಪಮುನ್ನೂರು : ಮರ್ತಾಜೆ ಮಣ್ಣುದ ಕೆಸರ್ದ ಗೊಬ್ಬು ಪಂದ್ಯಾಟ - Karavali Times ಸಜಿಪಮುನ್ನೂರು : ಮರ್ತಾಜೆ ಮಣ್ಣುದ ಕೆಸರ್ದ ಗೊಬ್ಬು ಪಂದ್ಯಾಟ - Karavali Times

728x90

25 August 2026

ಸಜಿಪಮುನ್ನೂರು : ಮರ್ತಾಜೆ ಮಣ್ಣುದ ಕೆಸರ್ದ ಗೊಬ್ಬು ಪಂದ್ಯಾಟ

 ಬಂಟ್ವಾಳ, ಆಗಸ್ಟ್ 25, 2026 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಮರ್ತಾಜೆ ಗುತ್ತು ಶ್ರೀ  ಮಲರಾಯ  ಗ್ರಾಮ ಸಮಿತಿ ವತಿಯಿಂದ ಮರ್ತಾಜೆ ಮಣ್ಣುದ ಕೆಸರ್ದ ಗೊಬ್ಬು ಪಂದ್ಯಾಟವು ಆಗಸ್ಟ್ 23 ರಂದು ಮಲರಾಯ ದೈವಸ್ಥಾನದಲ್ಲಿ ನಡೆಯಿತು. 

ಸಾಧ್ವಿ ಬಂಗೇರ ತಂಡ ಪ್ರಾರ್ಥನೆ ನೆರವೇರಿತು. ಮಲರಾಯ ದೈವಸ್ಥಾನದ ಗಡಿ ಪ್ರಧಾನ ಸುಕುಮಾರ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಹಮ್ಮಾಯಿ ಕ್ಷೇತ್ರ ಕಾರಾಂಬಡೆಯ ಅನುವಂಶಿಕ ಅರ್ಚಕ ಅರುಣ್ ಕುಮಾರ್ ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ,  ಗಂಗಾಧರ್ ಭಂಡಾರಿ ಆಳ್ವಾರ ಪಾಲು, ನಾಲುಕೈತ್ತಾಯ ದೈವಸ್ಥಾನದ ಗಡಿ ಪ್ರಧಾನ ಸುನೀತ್ ಯಾನೆ ಶಂಕರ ಪೂಜಾರಿ ಕರಂದಾಡಿ, ಸುದರ್ಶನ್, ಧನಂಜಯ ಕುಲಾಲ್, ಜಯಶಂಕರ್ ಬಾಸ್ರಿತ್ತಾಯ, ತಿಮ್ಮಪ್ಪ ಶೆಟ್ಟಿ ಕುಂಬಾರ್  ಹಾಸನ, ಶ್ರೀಮತಿ ಲಲಿತಾ, ಪ್ರೀತಮ್ ರೈ, ನಾಗೇಶ್ ಮರ್ತಾಜೆ, ಪುರಂದರ ದೇರಾಜೆ ಬೊಟ್ಟು, ಜಯಾನಂದ, ಅರುಣ್ ಕುಮಾರ್ ಕುಕ್ಕುದಕಟ್ಟೆ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಜಯೇಶ್ ಗೋವಿಂದ್, ಕಿಶೋರ್ ಆಚಾರ್ಯ, ಪರಮೇಶ್ವರ್, ಸಂಜೀವ ಪೂಜಾರಿ ಸುಭಾಸ್ ನಗರ, ಸೀತಾರಾಮ ಸಾಲಿಯಾನ್, ಮುರುಳಿದಾಸ್ ಕುಲಾಲ್, ನವೀನ್ ಸುವರ್ಣ ಮಿತ್ತಕಟ್ಟ, ಪದ್ಮನಾಭ ನಾರ್ಯ, ಶ್ರೀಮತಿ ಶಿವಲಕ್ಷ್ಮಿ ಮೊದಲಾದವರು ಭಾಗವಹಿಸಿದ್ದರು 

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮದ ಸಾಧಕರನ್ನು ಸನ್ಮಾನಿಸಲಾಯಿತು. ಶಿವರಾಮ್ ಮರ್ತಾಜೆ  ಸ್ವಾಗತಿಸಿ, ಸಂತೋಷ್ ಮರ್ತಾಜೆ ವಂದಿಸಿದರು. ಎಚ್ ಕೆ ನಯನಾಡು  ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮುನ್ನೂರು : ಮರ್ತಾಜೆ ಮಣ್ಣುದ ಕೆಸರ್ದ ಗೊಬ್ಬು ಪಂದ್ಯಾಟ Rating: 5 Reviewed By: karavali Times
Scroll to Top