ಬಂಟ್ವಾಳ, ಆಗಸ್ಟ್ 03, 2026 (ಕರಾವಳಿ ಟೈಮ್ಸ್) : ತಾಲೂಕಿನ ರಾಯಿ ಗ್ರಾಮದ ಹೊರಂಗಳ ಎಂಬಲ್ಲಿ ಜೀವನ್ ಪಿಂಟೋ ಬಿನ್ ಜೋಸೆಫ್ ಪಿಂಟೋ (43) ಎಂಬವರು ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದು, ಸದ್ರಿಯವರ ಚಪ್ಪಲಿ ಹಾಗೂ ಟಾರ್ಚ್ ಸದ್ರಿಯವರ ಮನೆಯ ತೊರೆಯ ಬಳಿ ಪತ್ತೆಯಾಗಿದೆ. ಜೀವನ್ ಅವರನ್ನು ಪೊಲೀಸ್ ಇಲಾಖೆ ಅಗ್ನಿಶಾಮಕ ಇಲಾಖೆ ಹಾಗೂ ಎನ್ ಡಿ ಆರ್ ಎಫ್ ತಂಡದವರು ಭಾನುವಾರ ಸಂಜೆವರೆಗೂ ಹುಡುಕಾಟ ನಡೆಸಿದ್ದು, ಪತ್ತೆಯಾಗಿರುವುದಿಲ್ಲ. ಭಾನುವಾರ ಸಂಜೆ ಕತ್ತಲಾದ ಬಳಿಕ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಮರುದಿನಕ್ಕೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2 August 2026
- Blogger Comments
- Facebook Comments
Subscribe to:
Post Comments (Atom)










0 comments:
Post a Comment