ಬಂಟ್ವಾಳ, ಆಗಸ್ಟ್ 10, 2026 (ಕರಾವಳಿ ಟೈಮ್ಸ್) : ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಮದ್ಯ ಸಹಿತ ಆರೋಪಿ ಬಂಧಿಸಿದ ಘಟನೆ ಆಗಸ್ಟ್ 9 ರಂದು ರಾತ್ರಿ ನಡೆದಿದೆ.
ಬಂಧಿತ ಆರೋಪಿಯನ್ನು ಶಂಭೂರು ನಿವಾಸಿ ಜಯಂತ (55) ಎಂದು ಹೆಸರಿಸಲಾಗಿದೆ. ಆಗಸ್ಟ್ 9 ರಂದು ರಾತ್ರಿ ವೇಳೆ ದೊರೆತ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಠಾಣಾ ಪಿಎಸೈ ದುರ್ಗಪ್ಪ ಕಲಘಟಗಿ ಅವರ ನೇತೃತ್ವದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ದಾಳಿ ವೇಳೆ ಪೊಲೀಸರು ಆರೋಪಿಯ ವಶದಲ್ಲಿದ್ದ ಒಟ್ಟು 103 ವಿವಿಧ ಮಾದರಿಯ ಮದ್ಯದ ಸ್ಯಾಚೆಟ್ ಗಳು (9.270 ಲೀಟರ್) ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 5,470/- ಆಗಿರುತ್ತದೆ. ಅಲ್ಲದೇ, ಮದ್ಯವನ್ನು ಮಾರಾಟ ಮಾಡಿ ಗಳಿಸಿದ ಹಣವೆಂದು ಆರೋಪಿಯು ಹಾಜರುಪಡಿಸಿದ 300/- ರೂಪಾಯಿ ನಗದು, ಹಾಗೂ ಸದರಿ ಸ್ಥಳದಲ್ಲಿದ್ದ ಕೆಎ19 ಎಚ್ ಎಫ್ 0862 ನೋಂದಣಿ ಸಂಖ್ಯೆಯ ಬಜಾಜ್ ಪ್ಲಾಟಿನಾ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment