ಬಂಟ್ವಾಳ, ಆಗಸ್ಟ್ 10, 2026 (ಕರಾವಳಿ ಟೈಮ್ಸ್) : ಸಜಿಪನಡು ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಶಾಡ ಮಾಸದ ಆಟಿಡೊಂಜಿ ದಿನ ಕಾರ್ಯಕ್ರಮ ಆಗಸ್ಟ್ 8 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಸೀಂ, ಪಿಟಿಎ ಉಪಾಧ್ಯಕ್ಷರಾದ ಶ್ರೀಮತಿ ಜೆನಿಟ್, ಶ್ರೀಮತಿ ಅಫ್ರಾ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ನಳಿನಾಕ್ಷಿ, ಶ್ರೀಮತಿ ದಿವ್ಯ, ಹಿರಿಯರಾದ ಮೊಹಮ್ಮದ್ ಹನೀಫ್, ಹನೀಫ್ ಗೋಳಿಪಡ್ಪು, ಗಣೇಶ್ ಸಜಿಪ ಗುತ್ತು ಮೊದಲಾದವರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ ಜಗದೀಶ್ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಅನಿಷ ಅನಿಸಿಕೆ ವ್ಯಕ್ತಪಡಿಸಿದರು. ಸಹಶಿಕ್ಷಕಿ ಶ್ರೀಮತಿ ಚಿತ್ರಾ ಆಟಿ ತಿಂಗಳ ಮಹತ್ವ ವಿವರಿಸಿದರು. ತುಳುನಾಡಿನ ಪರಂಪರೆ ಸಾರುವ ಪುರಾತನ ವಸ್ತುಗಳ ಪ್ರದರ್ಶನ ಹಾಗೂ ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಭಾಗವಹಿಸಿದ್ದವರಿಗೆ ವಿತರಿಸಲಾಯಿತು.











0 comments:
Post a Comment