ಪಿಲಿಕುಳ ಆಯುಕ್ತರಾಗಿ ಡಾ. ಅರುಣ್ ಕುಮಾರ್ ಶೆಟ್ಟಿ ನೇಮಕ - Karavali Times ಪಿಲಿಕುಳ ಆಯುಕ್ತರಾಗಿ ಡಾ. ಅರುಣ್ ಕುಮಾರ್ ಶೆಟ್ಟಿ ನೇಮಕ - Karavali Times

728x90

1 August 2026

ಪಿಲಿಕುಳ ಆಯುಕ್ತರಾಗಿ ಡಾ. ಅರುಣ್ ಕುಮಾರ್ ಶೆಟ್ಟಿ ನೇಮಕ

ಮಂಗಳೂರು, ಆಗಸ್ಟ್ 01, 2026 (ಕರಾವಳಿ ಟೈಮ್ಸ್) : ಪಿಲಿಕುಳ ಅಭಿವ್ಪಧ್ಧಿ ಪ್ರಾಧಿಕಾರದ ಆಯುಕ್ತರಾಗಿ ಡಾ. ಅರುಣ ಕುಮಾರ ಶೆಟ್ಟಿ ಎನ್ ಪುನರ್ ನೇಮಕಗೊಂಡಿದ್ದಾರೆ. ಈ ಹಿಂದೆ ಪಿಲಿಕುಳ ಅಭಿವೃಧ್ಧಿ ಪ್ರಾಧಿಕಾರದಲ್ಲಿ ಕಳೆದ ಒಂದೂವರೆ ವರ್ಷದಿಂದ ಹೆಚ್ಚುವರಿ ಪ್ರಭಾರದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ ದ.ಕ. ಜಿಲ್ಲೆಯ ಪಶುಪಾಲನಾ ಮತ್ತು ಪಶುವ್ಶೆದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅರುಣ ಕುಮಾರ ಶೆಟ್ಟಿ ಎನ್ ಇವರನ್ನು ಮತ್ತೆ ಪಿಲಿಕುಳ ಅಭಿವ್ಳಧ್ಧಿ ಪ್ರಾಧಿಕಾರದ ಆಯುಕ್ತರಾಗಿ ಹೆಚ್ಚುವರಿ ಪ್ರಭಾರದಲ್ಲಿ ನೇಮಕ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಮಾಡಿರುತ್ತಾರೆ. 

ಕಳೆದ ಜೂನ್ 2026ರಲ್ಲಿ ಸರಕಾರವು ರಾಜ್ಯ ಲೆಕ್ಕ ಪರಿಶೋದನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿದ್ದ ಶ್ರೀಕಾಂತ್ ರಾವ್ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಿದ್ದು ಸದ್ರಿಯವರು ಜುಲೈ ತಿಂಗಳಿನಲ್ಲಿ ನಿವೃತ್ತರಾಗಿರುವ ಹಿನ್ನಲೆಯಲ್ಲಿ ಪುನಃ ಈ ಹಿಂದೆ ಆಯುಕ್ತರಾಗಿ ಸೇವೆ ಸಲ್ಲಿಸಿದ ಡಾ. ಅರುಣ ಕುಮಾರ ಶೆಟ್ಟಿ ಎನ್ ಇವರನ್ನು ನೇಮಕ ಮಾಡಲಾಗಿದೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪಿಲಿಕುಳ ಆಯುಕ್ತರಾಗಿ ಡಾ. ಅರುಣ್ ಕುಮಾರ್ ಶೆಟ್ಟಿ ನೇಮಕ Rating: 5 Reviewed By: karavali Times
Scroll to Top