ಬಂಟ್ವಾಳ, ಆಗಸ್ಟ್ 07, 2026 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಮತ್ತೆ ಮಳೆ ಅಬ್ಬರ ಆರಂಭವಾಗಿದ್ದು, ಪೆರುವಾಯಿ ಗ್ರಾಮದ ಕಡೆಂಬಿಲ ನಿವಾಸಿ ಸುಶೀಲ ಕೋಂ ಸೇಸಪ್ಪ ಮೂಲ್ಯ ಅವರ ಮನೆಯ ಹಿಂಬದಿಯ ಗುಡ್ಡ ಕುಸಿದು ಮನೆಯ ಗೋಡೆಗೆ ಹಾನಿ ಸಂಭವಿಸಿದೆ.
ಅಮ್ಟಾಡಿ ಗ್ರಾಮದ ಬೆದ್ರಗುಡ್ಡೆ ನಿವಾಸಿ ಸರೋಜಿನಿ ಕೋಂ ಲೋಕೇಶ್ ಪೂಜಾರಿ ಅವರ ವಾಸ್ತವ್ಯದ ಮನೆಯ ಹಿಂಭಾಗ ಬರೆ ಜರಿದು ಭಾಗಶಃ ಹಾನಿ ಸಂಭವಿಸಿದೆ.












0 comments:
Post a Comment