ರೇಷನ್ ಕಾರ್ಡ್ ಗ್ರಾಹಕರು ಸೆ. 30ರೊಳಗೆ ಇ-ಕೆವೈಸಿ ಮಾಡಲು ಆಹಾರ ಇಲಾಖೆ ಸೂಚನೆ - Karavali Times ರೇಷನ್ ಕಾರ್ಡ್ ಗ್ರಾಹಕರು ಸೆ. 30ರೊಳಗೆ ಇ-ಕೆವೈಸಿ ಮಾಡಲು ಆಹಾರ ಇಲಾಖೆ ಸೂಚನೆ - Karavali Times

728x90

13 August 2026

ರೇಷನ್ ಕಾರ್ಡ್ ಗ್ರಾಹಕರು ಸೆ. 30ರೊಳಗೆ ಇ-ಕೆವೈಸಿ ಮಾಡಲು ಆಹಾರ ಇಲಾಖೆ ಸೂಚನೆ

ಮಂಗಳೂರು, ಆಗಸ್ಟ್ 13, 2026 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸೀಡಿಂಗ್ ಮತ್ತು ಇ-ಕೆವೈಸಿಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಒಟ್ಟು 2,16,436 ಪಡಿತರ ಚೀಟಿಯಲ್ಲಿನ 6,62,195 ಫಲಾನುಭವಿಗಳ ಇ-ಕೆವೈಸಿ ಬಾಕಿಯಿದ್ದು, ತಾಲೂಕುವಾರು ಪಟ್ಟಿ ಈ ಕೆಳಕಂಡಂತಿದೆ. ಈ  ಪ್ರಕ್ರಿಯೆಯನ್ನು  ಪೂರ್ಣಗೊಳಿಸಲು ಕಡ್ಡಾಯವಾಗಿ ಇ-ಕೆವೈಸಿ ಮಾಡಲು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆಯನ್ನು ನೀಡಲಾಗಿದೆ. ತಪ್ಪಿದಲ್ಲಿ ಪಡಿತರ ಪಡೆಯಲು ಸಮಸ್ಯೆಯಾಗುತ್ತದೆ ಎಂದು  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯ ಫಲಾನುಭವಿಗಳ ತಾಲೂಕುವಾರು ವಿವರ

ಬಂಟ್ವಾಳ : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 45480, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 141923

ಬೆಳ್ತಂಗಡಿ : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 37532, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 111798

ಕಡಬ : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 15074, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 43040

ಮಂಗಳೂರು : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 38364, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 116437, 

ಮೂಡಬಿದ್ರೆ: ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 11365, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 33252

ಮುಲ್ಕಿ : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 8055, ಇ-ಕೆವೈಸಿ  ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 23617

ಪುತ್ತೂರು : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 22116, ಇ-ಕೆವೈಸಿ  ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 69304

ಸುಳ್ಯ : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 14247, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 41630

ಉಳ್ಳಾಲ : ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 24203, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಸಂಖ್ಯೆ 81194.

  • Blogger Comments
  • Facebook Comments

0 comments:

Post a Comment

Item Reviewed: ರೇಷನ್ ಕಾರ್ಡ್ ಗ್ರಾಹಕರು ಸೆ. 30ರೊಳಗೆ ಇ-ಕೆವೈಸಿ ಮಾಡಲು ಆಹಾರ ಇಲಾಖೆ ಸೂಚನೆ Rating: 5 Reviewed By: karavali Times
Scroll to Top