ಬೆಂಗಳೂರು, ಆಗಸ್ಟ್ 08, 2026 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮತ್ತೊಮ್ಮೆ ದಿನಾಂಕ ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ. ಈ ಮಧ್ಯೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಅಥವಾ ತಮ್ಮ ಎಸ್.ಐ.ಆರ್. ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎನ್ನುವ ಬಗ್ಗೆ ಚೆಕ್ ಮಾಡಿಕೊಳ್ಳಲು ಆಯೋಗ ನೂತನ ವ್ಯವಸ್ಥೆ ಜಾರಿಗೆ ತಂದಿದೆ.
ಈ ಬಗ್ಗೆ ಚುನಾವಣಾ ಆಯೋಗ ವೆಬ್‌ಸೈಟ್ ರೂಪಿಸಿದ್ದು, ಈ ವೆಬ್‌ಸೈಟ್ ಮೂಲಕ ನೀವು ನಿಮ್ಮ ಎಪಿಕ್ ನಂಬರ್ ನಮೂದಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಪರಿಶೀಲನೆ ವೇಳೆ ನಿಮ್ಮ ಹೆಸರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದರೆ ಫಾರ್ಮ್-6 ಸಲ್ಲಿಸಿ ಹೆಸರನ್ನು ಸೇರಿಸಬಹುದು. ನೀವು ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ಫಾರ್ಮ್ – 6 (Form 6) ಭರ್ತಿ ಮಾಡುವ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.
ASDDO ಪಟ್ಟಿ :
ರಾಜ್ಯದಲ್ಲಿ ಒಟ್ಟು 1.11 ಕೋಟಿ ಮತದಾರರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ASDDO (ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಮತ್ತು ಇತರರು – Absentee, Shifted, Dead, Duplicate, and Others) ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ನಿಮ್ಮ ಬೂತ್ ಮಟ್ಟದ ಅಧಿಕಾರಿಗಳನ್ನು (BLOs) ಸಂಪರ್ಕಿಸಿ ತಮ್ಮ ವಿವರಗಳನ್ನು ಸಲ್ಲಿಸಬಹುದು. ಅಥವಾ ಕಂಪ್ಯೂಟರ್ ಮೂಲಕ ನೀವೇ ಆನ್ ಲೈನ್ ನಲ್ಲಿ https://voters.eci.gov.in/ ವೆಬ್‌ಸೈಟ್ ಭೇಟಿ ನೀಡಿ ಭರ್ತಿ ಮಾಡಿಕೊಳ್ಳಬಹುದು.
ASDDO ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಲು https://karnataka-asddo-lookup.vercel.app/ ವೆಬ್‌ಸೈಟಿಗೆ ಭೇಟಿ ನೀಡಿ ನಿಮ್ಮ ಎಪಿಕ್ ನಂಬರ್ (ವೋಟರ್ ಐಡಿ) ನಂಬರ್ ಹಾಕಿದರೆ "ಒಳ್ಳೆಯ ಸುದ್ದಿ – ಈ ಗುರುತಿನ ಚೀಟಿ ತೆಗೆದು ಹಾಕಿದ ಪಟ್ಟಿಯಲ್ಲಿ ಇಲ್ಲ" ಎಂಬ ಸಂದೇಶ ಬಂದರೆ ನಿಮ್ಮ ಹೆಸರು ಪಟ್ಟಿಯಲ್ಲಿದೆ ಎಂಬುದು ದೃಢವಾಗಲಿದೆ.
ಈ ಪಟ್ಟಿ ತೆಗೆದುಹಾಕುವಿಕೆಗಳನ್ನು ಮಾತ್ರ ಒಳಗೊಂಡಿದೆ. ನಿಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು voters.eci.gov.in ನೋಡಿ ಅಥವಾ ನಿಮ್ಮ BLO ಅವರನ್ನು ವಿಚಾರಿಸಬಹುದು.










0 comments:
Post a Comment