ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿ ವಾಹನ ಸಹಿತ ಆರೋಪಿ ಬಂಧಿಸಿದ ಉರ್ವ ಪೊಲೀಸರು - Karavali Times ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿ ವಾಹನ ಸಹಿತ ಆರೋಪಿ ಬಂಧಿಸಿದ ಉರ್ವ ಪೊಲೀಸರು - Karavali Times

728x90

19 August 2026

ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿ ವಾಹನ ಸಹಿತ ಆರೋಪಿ ಬಂಧಿಸಿದ ಉರ್ವ ಪೊಲೀಸರು

 ಮಂಗಳೂರು, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನ ಕಳ್ಳನೋರ್ವನನ್ನು ತಿಂಗಳ ಅಂತರದಲ್ಲಿ ಉರ್ವ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ-ಕೋಡಿಯ ಬೈತುಲ್ ಕೌಸರ್ ನ್ಯೂ ತೋಟ ಹೌಸ್ ನಿವಾಸಿ ದಿವಂಗತ ಇಬ್ರಾಹಿಂ ಎಂಬವರ ಪುತ್ರ ಮುಹಮ್ಮದ್ ಫೈಝಲ್ ಯಾನೆ ತೋಟ ಫೈಝಲ್ (40) ಎಂದು ಹೆಸರಿಸಲಾಗಿದೆ. 

ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕ್ಕಲ್ ಎಂಬಲ್ಲಿ ಮನೆಯೊಂದರ ಎದುರು ಪಾರ್ಕ್ ಮಾಡಿದ್ದ ಕೆಎ19 ಇಬಿ2226 ನೋಂದಣಿ ಸಂಖ್ಯೆಯ ಹೋಂಡಾ ಡಿಯೋ ಸ್ಕೂಟರ್ ಕಳವಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಜುಲೈ 24 ರಂದು ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉರ್ವ ಪೊಲೀಸರು ಪರಿಸರದ ಸಿಸಿ ಟೀವಿ ಫೂಟೇಜ್ ಸಹಿತ ವಿವಿಧ ಕುರುಹುಗಳನ್ನು ಪತ್ತೆ ಹಚ್ಚಿ ಆರೋಪಿಯನ್ನು ಆಗಸ್ಟ್ 18 ರಂದು ಕಳವಾದ ಸ್ಕೂಟರ್ ಸಹಿತ ಬಂಧಿಸಿದ್ದಾರೆ. ಆರೋಪಿಯ ವಿರುದ್ದ ಕರ್ನಾಟಕ, ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈತನ ವಿರುದ್ದ ಜಿಲ್ಲೆಯ ಮಂಗಳೂರು ಉತ್ತರ, ಉಳ್ಳಾಲ, ಕೊಣಾಜೆ, ಬಂಟ್ವಾಳ ಗ್ರಾಮಾಂತರ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ದಸ್ತಗಿರಿ ವಾರಂಟ್ ಇರುವುದು ತಿಳಿದು ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿ ವಾಹನ ಸಹಿತ ಆರೋಪಿ ಬಂಧಿಸಿದ ಉರ್ವ ಪೊಲೀಸರು Rating: 5 Reviewed By: karavali Times
Scroll to Top