![]() |
| ಪೂಂಜಾ ಕುಟುಂಬದಿಂದ ಮಿಲಾದ್ ಮೆರವಣಿಗೆಗೆ ಸಿಹಿ ವಿತರಣೆ |
![]() |
| ದಿವಂಗತ ಸದಾನಂದ ಪೂಂಜಾ |
![]() |
| ದೇವಿಪ್ರಸಾದ್ ಪೂಂಜಾ (ಶೋಭಿತ್ ಪೂಂಜಾ) |
ಬಂಟ್ವಾಳ, ಆಗಸ್ಟ್ 28, 2026 (ಕರಾವಳಿ ಟೈಮ್ಸ್) : ಕೊಳಕೆ ಮಸೀದಿ ವತಿಯಿಂದ ಪ್ರತಿ ವರ್ಷ ಆಚರಿಸಲ್ಪಡುವ ಈದ್ ಮಿಲಾದ್ ದಿನದ ಮುಸ್ಲಿಮರ ಮೆರವಣಿಗೆಗೆ ಪೂಂಜಾ ಕುಟುಂಬ ಕಳೆದ ಅರ್ಧ ಶತಮಾನಗಳಿಂದ ಸಿಇಹಿ ತಿಂಡಿ ಪಾನೀಯ ವಿತರಿಸುತ್ತಿರುವುದು ಇಂದಿಗೂ ಮುಂದುವರಿದಿದ್ದು, ಕರಾವಳಿಯ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮತೆ ಮೇಳೈಸಿದ ಇಂದಿನ ಸಂದರ್ಭದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಹೋದರ ಧರ್ಮೀಯರು ಸಿಹಿ ಹಂಚುವುದು ಕೆಲವು ಕಡೆ ಸುದ್ದಿಯಾಗುತ್ತಿದೆ. ಆದರೆ ಕಳೆದ 50 ವರ್ಷಗಳಿಂದ ದಿವಂಗತ ಸದಾನಂದ ಪೂಂಜಾ ಅವರ ಕುಟುಂಬದಿಂದ ನಡೆಯುತ್ತಾ ಬಂದಿರುವ ಈ ಸೌಹರ್ದದ ನಡೆ ಎಲ್ಲಿಯೂ ಸುದ್ದಿಯಾಗಲೇ ಇಲ್ಲ.
ಕೊಳಕೆ ಮುಹಿಯುದ್ದೀನ್ ಜುಮ್ಮಾ ಮಸೀದಿಯಿಂದ ಹೊರಡುವ ಈದ್ ಮಿಲಾದ್ ಮೆರವಣಿಗೆ ಸುಭಾಷ್ ನಗರ ಸಿರಾಜುಲ್ ಹುದಾ ಮಸೀದಿವರೆಗೆ ಸಾಗಿ ಬರುವ ಹಾದಿಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಿಹಿ ತಿಂಡಿ ಜೊತೆ ತಂಪು ಪಾನೀಯವನ್ನು ದಿವಂಗತ ಸದಾನಂದ ಪೂಂಜಾ ಅವರ ಕುಟುಂಬ ನಿರಂತರ ಐದು ದಶಕಗಳ ಕಾಲದಿಂದಲೂ ನೀಡುತ್ತಾ ಬಂದಿದೆ ಎಂಬುದು ಇಂದಿಗೂ ರಹಸ್ಯವಾಗಿಯೇ ಇದೆ.
ದಿವಂಗತ ಬರಂಗರೆ ಸದಾನಂದ ಪೂಂಜಾ ಅವರು ತಮ್ಮ ಕಾಲದಿಂದ ಆರಂಭಿಸಿರುವ ಈ ಸೌಹಾರ್ದ ಪರಂಪರೆಗೆ ಸರಿಸುಮಾರು 50 ವರ್ಷಗಳಿಗೂ ಮಿಕ್ಕಿದ ಇತಿಹಾಸ ಇದೆ ಎನ್ನುವ ಸ್ಥಳೀಯರು ಇದೀಗ ಸದಾನಂದ ಪೂಂಜಾ ಅವರ ನಿಧನಾ ನಂತರ ಈ ಸಂಪ್ರದಾಯವನ್ನು ಅವರ ಪುತ್ರರಾಗಿರುವ ದೇವಿಪ್ರಸಾದ್ ಪೂಂಜಾ ಅಲಿಯಾಸ್ ಶೋಭಿತ್ ಪೂಂಜಾ ಅವರು ಮುಂದುವರಿಸುತ್ತ ಬಂದಿದ್ದಾರೆ.
ದಿವಂಗತ ಸದಾನಂದ ಪೂಂಜಾ ಅವರು ರಾಜಕೀಯ ಮುತ್ಸದ್ದಿಯಾಗಿದ್ದು, ತಮ್ಮ ಪರಿಸರದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜೊಂದನ್ನು ಸ್ಥಾಪಿಸಲು ಕಾರಣರಾಗಿ ಇಂದಿಗೂ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಕಾರಣರಾಗಿದ್ದಾರೆ ಎಂದು ಪೂಂಜಾ ಅವರ ಶೈಕ್ಷಣಿಕ ಕೊಡುಗೆಯನ್ನು ನೆನಪಿಸುವ ಸ್ಥಳೀಯ ನಿವಾಸಿಗಳು ರಹಸ್ಯವಾಗಿ ಅವರ ಕುಟುಂಬ ನಡೆಸಿಕೊಂಡು ಬರುತ್ತಿರುವ ಮಿಲಾದ್ ಸಂದರ್ಭದ ಸೌಹಾರ್ದತೆಯ ಕೆಲಸವನ್ನೂ ಇಂದು ಸಮಾಜದ ಮುಂದೆ ತೆರೆದಿಟ್ಟಿದ್ದಾರೆ. ಇದೇ ರೀತಿಯ ಸ್ನೇಹ-ಸೌಹಾರ್ದತೆಯ ಕಾರ್ಯಚಟುವಟಿಕೆಗಳು ನಾಡಿನೆಲ್ಲೆಡೆ ವ್ಯಾಪಕವಾಗಿ ನಡೆಯಲಿ ಎಂದು ಈ ಭಾಗದ ಜನ ಆಶಿಸಿದ್ದಾರೆ.























0 comments:
Post a Comment