ವೃದ್ದೆಯ ಚಿನ್ನಾಭರಣ ಸುಲಿಗೆ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಮೊಮ್ಮಗನೇ ಆರೋಪಿ, ಬಂಧನ - Karavali Times ವೃದ್ದೆಯ ಚಿನ್ನಾಭರಣ ಸುಲಿಗೆ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಮೊಮ್ಮಗನೇ ಆರೋಪಿ, ಬಂಧನ - Karavali Times

728x90

17 August 2026

ವೃದ್ದೆಯ ಚಿನ್ನಾಭರಣ ಸುಲಿಗೆ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಮೊಮ್ಮಗನೇ ಆರೋಪಿ, ಬಂಧನ

 ಬಂಟ್ವಾಳ, ಆಗಸ್ಟ್ 17, 2026 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಉದ್ದದಗುಡ್ಡೆ ಎಂಬಲ್ಲಿ ಆಗಸ್ಟ್ 14 ರಂದು ನಡೆದ ಕಳವು ಪ್ರಕರಣ ಬೇಧಿಸಿದ ಪೊಲೀಸರು ಮನೆಯೊಡತಿಯ ಮೊಮ್ಮಗನೇ ಆಗಿರುವ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಬಂಧಿತ ಆರೋಪಿಯನ್ನು ತೆಂಕಕಜೆಕಾರು ನಿವಾಸಿ ಶಬೀರ್ (33) ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಯಿಂದ ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಂಡಿರುವ ಪೊಲೀಸರು ಆತನನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ಸ್ಥಳೀಯ ನಿವಾಸಿ ಸಾದಿಕ್ ಎಂಬವರ ತಾಯಿ ಅವ್ವಮ್ಮ (82) ಎಂಬವರ ಮನೆಯಲ್ಲಿ ಆಗಸ್ಟ್ 14 ರಂದು ಮಹಿಳೆ ಒಬ್ಬಂಟಿಯಾಗಿರುವಾಗ ಯಾರೋ ಅಪರಿಚಿತ ವ್ಯಕ್ತಿಯೋರ್ವನು ಮುಖಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ಬಂದು ಮಹಿಳೆಯ ಎರಡು ಕೈಯಲ್ಲಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ  ಎಳೆದುಕೊಂಡು ಹೋಗಿದ್ದು, ಈ ವೇಳೆ ವೃದ್ದೆಯ ಕೈಗೆ ಗಾಯವಾಗಿತ್ತು. ಈ ಬಗ್ಗೆ ಸಾದಿಕ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆಗಸ್ಟ್ 16 ರಂದು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಬೆಳ್ತಂಗಡಿ ಡಿವೈಎಸ್ಪಿ ಶ್ರೀಮತಿ ರೋಹಿಸಣಿ ಸಿ ಕೆ ಅವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ರವಿ ಬಿ ಎಸ್, ಪೂಂಜಾಲಕಟ್ಟೆ ಪಿಎಸ್ಸೈ ರಾಜೇಶ್ ಕೆ ವಿ, ಸಿಬ್ಬಂದಿಗಳಾದ ಎಎಸ್ಸೈ ಬೆನ್ನಿಚ್ಚನ್, ಪ್ರವೀಣ್ ಮೂರುಗೋಳಿ, ರಾಜೇಶ್, ವಿಜಯ್ ಕುಮಾರ್, ರಾಹುಲ್ ರಾವ್, ನಾಗರಾಜ್, ರಜಿತ್, ಬಸವರಾಜ್, ಸತೀಶ್, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರು ಕರ್ತವ್ಯ ನಿರ್ವಹಿಸಿರುತ್ತಾರೆ.

  • Blogger Comments
  • Facebook Comments

0 comments:

Post a Comment

Item Reviewed: ವೃದ್ದೆಯ ಚಿನ್ನಾಭರಣ ಸುಲಿಗೆ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಮೊಮ್ಮಗನೇ ಆರೋಪಿ, ಬಂಧನ Rating: 5 Reviewed By: karavali Times
Scroll to Top