ಬಂಟ್ವಾಳ, ಆಗಸ್ಟ್ 17, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ಒಕ್ಕೂಟದ ಬಂಟ್ವಾಳ ತಾಲೂಕು ಘಟಕಾಧ್ಯಕ್ಷರಾಗಿ ಪಿ ಜೆ ಅಬೂಸ್ವಾಲಿಹ್ ಪಾಣೆಮಂಗಳೂರು ಅವರು ನೇಮಕಗೊಂಡಿದ್ದಾರೆ.
ಒಕ್ಕೂಟದ ರಾಜ್ಯಾಧ್ಯಕ್ಷ ಚಳುವಳಿ ಡಾ ಚಲಪತಿ ಗೌಡ ಅವರು ಅಬೂಸ್ವಾಲಿಹ್ ಅವರನ್ನು ಬಂಟ್ವಾಳ ತಾಲೂಕು ಘಟಕಾಧ್ಯಕ್ಷರಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ನಾಡು-ನುಡಿ, ನೆಲ-ಜಲ, ಕಲೆ-ಸಂಸೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆ ಸಂಘಟನೆಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಉತ್ಸಾಹಿ ಯುವಕರು ಸಂಘಟನೆಗೆ ಸೇರಲು ಪಿ ಜೆ ಅಬೂಸ್ವಾಲಿಹ್ ಅವರ ಮೊಬೈಲ್ ಸಂಖ್ಯೆ 9663103183 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.












0 comments:
Post a Comment